ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಾಗಾರ…

ಬಂಟ್ವಾಳ : ಯಶಸ್ಸು ಸಾಧಿಸಲು ಪ್ರತಿಭೆ ಇರಲೇ ಬೇಕು ಎಂಬ ಭಾವನೆಯಿಂದ ಹೊರಬಂದು ಸತತ ಪ್ರಯತ್ನದಿಂದಲೂ ಯಶಸ್ಸು ಸಾಧಿಸಬಹುದೆಂಬ ಪ್ರೇರಣಾದಾಯಿ ಮಾತುಗಳನ್ನು ಮಂಗಳೂರು ವಿವಿಯ ಸಿಂಡಿಕೇಟ್ ಸದಸ್ಯ ಮತ್ತು ಎಂಐಟಿ ಮಾಹೆ ಮಣಿಪಾಲದ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಕರುಣಾಕರ ಎ. ಕೋಟೆಗಾರ್ ಅವರು ಹೇಳಿದರು.
ಅವರು ಯಶಸ್ಸಿಗೆ 10 ಪ್ರಮುಖ ಅಂಶಗಳು ಎಂಬ ವಿಷಯದ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಡುತ್ತಾ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ಇದರ ಉದ್ಯೋಗ ಮತ್ತು ತರಬೇತಿ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯೆ ಶ್ರೀಮತಿ ಲಕ್ಷ್ಮೀ ರಘುರಾಜ್, ಉದ್ಯೋಗ ಮತ್ತು ತರಬೇತಿ ಘಟಕದ ಸಂಚಾಲಕ ಮತ್ತು ಬೌತಶಾಸ್ತ್ರ ಪ್ರಾಧ್ಯಾಪಕ ಶ್ರೀ ಸುಬ್ರಹ್ಮಣ್ಯ ಕೆ, ಮತ್ತು ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‍ಕಟ್ಟೆ ಉಪಸ್ಥತರಿದ್ದರು. ಗಣಿತ ಪ್ರಾಧ್ಯಾಪಕಿ ಚಂದ್ರಕಲಾ ಸ್ವಾಗತಿಸಿ, ಬೌತಶಾಸ್ತ್ರ ಪ್ರಾಧ್ಯಾಪಕ ಶ್ರೀ ಸುಬ್ರಹ್ಮಣ್ಯ ಕೆ ವಂದಿಸಿ, ನಿರೂಪಿಸಿದರು.

Related Articles

Back to top button