ಮೂಡುಬಿದ್ರಿ – ಪುರಸಭೆಯ ಪೌರಕಾರ್ಮಿಕರಿಗೆ ಗೌರವಾರ್ಪಣೆ ,ಸಹಭೋಜನ…

ಮೂಡುಬಿದ್ರಿ: ಮಾನ್ಯ ಪ್ರಧಾನ ಮಂತ್ರಿಗಳ 71ನೇ ಜನ್ಮದಿನದ ಪ್ರಯುಕ್ತ ಸೇವೆ ಮತ್ತು ಸಮರ್ಪಣ ಅಭಿಯಾನದಲ್ಲಿ ಮೂಲ್ಕಿ-ಮೂಡುಬಿದಿರೆ ಮಂಡಲ ಯುವ ಮೋರ್ಚಾ ಮತ್ತು ನಗರ ಮಹಾಶಕ್ತಿ ಕೇಂದ್ರ ವತಿಯಿಂದ ಪುರಸಭೆಯ ಪೌರಕಾರ್ಮಿಕರಿಗೆ ಹಣ್ಣು-ಹಂಪಲು ನೀಡಿ ಗೌರವಿಸಿ ಅವರ ಜೊತೆ ಸಹಭೋಜನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷರಾದ ಪ್ರಸಾದ್ ಕುಮಾರ್ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಸುನೀಲ್ ಆಳ್ವ, ಜಿಲ್ಲಾ ಉಪಾಧ್ಯಕ್ಷರಾದ ಈಶ್ವರ್ ಕಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ,ಯುವ ಮೋರ್ಚಾದ ಅಧ್ಯಕ್ಷರಾದ ಅಶ್ವತ್ ಪಣಪಿಲ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಕೇಶವ ಕರ್ಕೇರ ,ಗೋಪಾಲ್ ಶೆಟ್ಟಿಗಾರ್, ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಧನುಷ್, ಪುರಸಭಾ ಉಪಾಧ್ಯಕ್ಷರಾದ ಸುಜಾತ ಶಶಿಕಿರಣ್ ,ಸ್ಥಾಯಿ ಸಮಿತಿ ಅಧ್ಯಕ್ಷರಾದ ನಾಗರಾಜ್ ಪೂಜಾರಿ, ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ಲಕ್ಷ್ಮಣ್ ಪೂಜಾರಿ, ಪುರಸಭಾ ಸದಸ್ಯರುಗಳಾದ ಜಯಶ್ರೀ ಕೇಶವ್, ಧನಲಕ್ಷ್ಮಿ ,ಸೌಮ್ಯ ಸಂದೀಪ್ ಶೆಟ್ಟಿ, ಶ್ವೇತಾ ಪ್ರವೀಣ್ ಜೈನ್, ದಿನೇಶ್ ಮಾರೂರು, ಗಿರೀಶ್ ,ನವೀನ್ ಶೆಟ್ಟಿ, ಕಾರ್ಯದರ್ಶಿ ಸಾತ್ವಿಕ್ ಮಲ್ಯ ,ಯುವ ಮೋರ್ಚಾದ ಪದಾಧಿಕಾರಿಗಳು ಪುರಸಭಾ ಸಿಬ್ಬಂದಿಗಳು ಪೌರಕಾರ್ಮಿಕರು ಉಪಸ್ಥಿತರಿದ್ದರು.