ನಮ್ಮ ಆಹಾರ ಪದ್ಧತಿಯ ವ್ಯತ್ಯಾಸವೇ ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ – ಮಹಾಬಲ ಕುಲಾಲ್…

ಬಂಟ್ವಾಳ : ಜು 21, ನಮ್ಮ ಆಹಾರ ಪದ್ಧತಿಯ ವ್ಯತ್ಯಾಸವೇ ನಮ್ಮ ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ. ಸರಿಯಾದ ಆಹಾರ ಪದ್ಧತಿಯ ಜೊತೆಗೆ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡುತ್ತಾ, ನಮ್ಮ ಪರಿಸರದ ಸ್ವಚ್ಛತೆ ಕಾಪಾಡುವಲ್ಲಿ ಗಮನ ಹರಿಸೋಣ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್ ಹೇಳಿದರು .
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್( ರಿ)ಬಂಟ್ವಾಳ ಇದರ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಯೋಜನೆಯ ಸಿದ್ದಕಟ್ಟೆ ವಲಯದ ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ, ಗ್ರಾಮ ಪಂಚಾಯತ್ ಕುಕ್ಕಿಪಾಡಿ, ಗ್ರಾಮ ಪಂಚಾಯತ್ ಸಂಗಬೆಟ್ಟು , ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ (ರಿ.)ಸಿದ್ದಕಟ್ಟೆ , ರೋಟರಿ ಕ್ಲಬ್ ಸಿದ್ದಕಟ್ಟೆ,ಎ ಜೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಕುಂಟಿಕಾನ ಮಂಗಳೂರು,ಎ ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮಂಗಳೂರು, ಇದರ ಸಹಯೋಗದೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ಸಿದ್ದಕಟ್ಟೆ ಇಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಸಿದ್ದಕಟ್ಟೆ ವಲಯ ಅಧ್ಯಕ್ಷರಾದ ಸುರೇಶ್ ಅಂಚನ್ ವಹಿಸಿದ್ದರು. ಉದ್ಘಾಟನೆಯನ್ನು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ( ರಿ)ಸಿದ್ದಕಟ್ಟೆ ಇದರ ಗೌರವಾಧ್ಯಕ್ಷರಾದ ಗೋಪಾಲ್ ಬಂಗೇರ ಮಾಡಿ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪ್ರಸಿದ್ಧ ಆಸ್ಪತ್ರೆಗಳ ವೈದ್ಯರುಗಳನ್ನು ಗ್ರಾಮೀಣ ಪ್ರದೇಶಕ್ಕೆ ಕರೆಸಿ ಜನರ ಆರೋಗ್ಯ ತಪಾಸಣೆ ಮಾಡುವಂತಹ ಕಾರ್ಯ ಮೆಚ್ಚುವಂತದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಹೇಳಿ ಶುಭ ಹಾರೈಸಿದರು . ವೇದಿಕೆಯಲ್ಲಿ ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೇಖರ್ ಶೆಟ್ಟಿ ಬದ್ಯಾರು, ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜೀವಿ ಪೂಜಾರಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಸಿದ್ದಕಟ್ಟೆ ವಲಯ ಅಧ್ಯಕ್ಷರಾದ , ಸದಾನಂದ ಶೀತಲ್, ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಸಿದ್ದಕಟ್ಟೆ ಅಧ್ಯಕ್ಷರು ದಿನೇಶ್, ಎ ಜೆ ಆಸ್ಪತ್ರೆ ಮಂಗಳೂರಿನ ಕ್ಯಾನ್ಸರ್ ತಜ್ಞರಾದ ಡಾಕ್ಟರ್ ಪುನೀತ್ ಜನಜಾಗೃತಿ ವೇದಿಕೆ ಸದಸ್ಯರಾದ ಜಗದೀಶ್ ಕೊಯಿಲ, ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ .ಪ್ರಗತಿ ಬಂದು ಸ್ವ ಸಹಾಯ ಸಂಘದ ಸಿದ್ದ ಕಟ್ಟೆ ವಲಯದ ಅಧ್ಯಕ್ಷರು ಪದಾಧಿಕಾರಿಗಳು, ರೋಟರಿ ಕ್ಲಬ್ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು, ನಾರಾಯಣ ಗುರು ಸೇವಾಸಮಿತಿ ಪದಾಧಿಕಾರಿಗಳು ಸದಸ್ಯರು, ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಬಂಟ್ವಾಳ ತಾಲೂಕಿನಲ್ಲಿ 25 ಕೇಂದ್ರಗಳನ್ನು ಒಳಗೊಂಡಿದ್ದು ಈ ಎಲ್ಲ ಕೇಂದ್ರಗಳ ದಾಖಲಾತಿ ಒಂದೇ ರೀತಿ ಬೈಂಡ್ ನ್ನು ನೇಸರ ಸಮೃದ್ಧಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಸಾಂಕೇತಿಕ ವಾಗಿ ಜಿಲ್ಲಾ ನಿರ್ದೇಶಕರು ಮಹಾಬಲ ಕುಲಾಲ್ ರವರು ಹಸ್ತಾಂತರ ಮಾಡಿದರು.
ಕೇಂದ್ರದ ಸದಸ್ಯೆ ವನಿತಾ ಪ್ರಾರ್ಥಿಸಿ, ಸಿದ್ದಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ರೊ. ಶಿವಯ್ಯ ಎಸ್ ಎಲ್ ಸ್ವಾಗತಿಸಿ, ಜ್ಞಾನ ವಿಕಾಸ ಸಮ್ಮನ್ವಾಧಿಕಾರಿ ಶೃತಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸಾಮಾನ್ಯ ರೋಗ ತಪಾಸಣೆ , ಕ್ಯಾನ್ಸರ್ ರೋಗ ತಜ್ಞರು, ಮೂತ್ರ ಶಾಸ್ತ್ರಜ್ಞರು, ಹೃದ್ರೋಗ ತಜ್ಞರು, ಕಿವಿ ಮೂಗು ಮತ್ತು ಗಂಟಲು ತಜ್ಞರು,ಚರ್ಮರೋಗ ತಪಾಸಣೆ , ಸ್ತ್ರೀರೋಗ ತಪಾಸಣೆ, ಇ ಸಿ ಜಿ ಚಿಕಿತ್ಸೆ ಮೊದಲಾದವುಗಳನ್ನು ಮಾಡಲಾಯಿತು.

Sponsors

Related Articles

Back to top button