ಶಾಸಕರಾಗಿದ್ದ ಸಿ ಹೆಚ್ ಕುಂಞಮ್ಬು ಅವರಿಗೆ ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಸನ್ಮಾನ…

ಸುಳ್ಯ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಕಾಸರಗೋಡಿನ ತೆಕ್ಕಿಲ್ ಪ್ರದೇಶ ಒಳಗೊಂಡ ಉದುಮ ಕ್ಷೇತ್ರದ ಸಿ ಪಿ ಐ (ಎಂ) ಶಾಸಕ ಮತ್ತು ಮಂಜೇಶ್ವರದ ಶಾಸಕರಾಗಿದ್ದ ಸಿ ಹೆಚ್ ಕುಂಞಮ್ಬು ಅವರು ತೆಕ್ಕಿಲ್ ಪ್ರತಿಷ್ಠಾನಕ್ಕೆ ಆಗಮಿಸಿದ ಸಂದರ್ಭದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಸನ್ಮಾನಿಸಿದರು.
ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಶಾಸಕರನ್ನು ಪರಿಚಯಿಸಿ ಸ್ವಾಗತಿಸಿದರು. ತೆಕ್ಕಿಲ್ ಪ್ರತಿಷ್ಠಾನದ ಕಾರ್ಯಾಚಟುವಟಿಕೆ ಬಗ್ಗೆ ಹೆಮ್ಮೆ ಇದೆ. ಅವಿಭಜಿತ ದಕ ಜಿಲ್ಲೆಯ ಕಾಸರಗೋಡು ಮತ್ತು ಸುಳ್ಯ, ಮಂಗಳೂರು ಜಿಲ್ಲೆ ಸಹಿತ ನಾವೆಲ್ಲ ಒಂದೇ ಜಿಲ್ಲೆಯ ಜನರು ಎಂಬ ಭಾವನೆ ಇಂದಿಗೂ ಇದೆ ಎಂದು ಶಾಸಕರು ಸಂತಸ ವ್ಯಕ್ತಪಡಿಸಿದರು.