ಸಜಿಪನಡು – ಶ್ರೀಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸುತ್ತು ಪೌಳಿ ಕೆಲಸ ಆರಂಭ…

ಬಂಟ್ವಾಳ: ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪನಡು ಬಂಟ್ವಾಳ ಇದರ ಜೀರ್ಣೋದ್ಧಾರದ ಕೆಲಸ ಕಾರ್ಯಗಳು ಪ್ರಗತಿಯಲ್ಲಿದ್ದು, ದೇವಾಲಯದ ಸುತ್ತು ಪೌಳಿಯನ್ನು ನೂತನವಾಗಿ ಕೆಂಪುಕಲ್ಲಿನಿಂದ ನಿರ್ಮಿಸಲು ಅಂದಾಜಿಸಲಾಗಿದ್ದು, ಮುರಕಲ್ಲಿನ ಶಿಲ್ಪಿಗೆ ಕೆತ್ತನೆ ಕೆಲಸ ಆರಂಭಿಸಲು ಬುಧವಾರದಂದು ದೇವರ ಪ್ರಸಾದವನ್ನು ನೀಡಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮುಳ್ಳುಂಜ ವೆಂಕಟೇಶ್ವರ ಭಟ್, ಕೆ ರಾಧಾಕೃಷ್ಣ ಆಳ್ವ, ಯಶವಂತ ದೇರಾಜೆ, ಪ್ರದೀಪ್ ಶೆಟ್ಟಿ ಸಜಿಪ ಮಾಗಣೆ, ತಂತ್ರಿ ಎo ಸುಬ್ರಮಣ್ಯ ಭಟ್, ಅರ್ಚಕ ಗಣಪತಿ ಭಟ್ ಉಪಸ್ಥಿತರಿದ್ದರು.