ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನ- ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ ಕಲಶಾಭಿಷೇಕದ ಆಮಂತ್ರಣ ಬಿಡುಗಡೆ…

ಬಂಟ್ವಾಳ : ಧಾರ್ಮಿಕ ಶೃದ್ದಾಕೇಂದ್ರಗಳ ಜೀರ್ಣೋದ್ಧಾರಗಳು ನಡೆದಾಗ ಹಿಂದೂಗಳ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.
ಅವರು ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಡಿ.22 ರಿಂದ 26 ರ ವರೆಗೆ ನಡೆಯಲಿರುವ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ ಕಲಶಾಭಿಷೇಕದ ಪೂರ್ವಭಾವಿಯಾಗಿ ಆಮಂತ್ರಣ ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರತಿಯೊಂದು ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಪ್ರಥಮ ಆಧ್ಯತೆಯಲ್ಲಿ ಒದಗಿಸಲು ಪ್ರಯತ್ನ ಮಾಡುತ್ತೇನೆ.ಈ ದೇವಾಲಯದ ಬ್ರಹ್ಮಕಲಶ ಕಾರ್ಯಕ್ರಮ ಯಶಸ್ವಿ ಯಾಗಿ ನಡೆಯಲು ಸಮಿತಿ ಜೊತೆ ಊರಪರ ಊರ ಜನರು ಜೊತೆಯಾಗಿ ಕೆಲಸ ಮಾಡಬೇಕು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ , ಉದ್ಯಮಿ ಮಂಜುನಾಥ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಜಯರಾಮ ಹೊಳ್ಳ ನಗ್ತಿಮಾರ್, ಉದ್ಯಮಿ ರಘು ಸಪಲ್ಯ ಉದ್ಯಮಿ ಹರೀಶ್ ಶೆಟ್ಟಿ, ಸದಾಶಿವ ಸನಿಲ್,
ಉದಯ ಕುಮಾರ್ ರಾವ್ ಬಂಟ್ವಾಳ, ಜನಾರ್ಧನ ಬೊಂಡಾಲ, ವಜ್ರನಾಥ ಕಲ್ಲಡ್ಕ,ಪ್ರಧಾನ ಅರ್ಚಕ ಶಿವಪ್ರಸಾದ್, ವಿನೋದ್ ಶೆಟ್ಟಿ ಬೊಂಡಾಲ ಉಪಸ್ಥಿತರಿದ್ದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಪ್ರಸ್ತಾವಿಕವಾಗಿ ಮಾತನಾಡಿದರು. ನಾಗೇಶ್ ಕಲ್ಲಡ್ಕ ಸ್ವಾಗತಿಸಿ ವಂದಿಸಿದರು.

Sponsors

Related Articles

Back to top button