ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್ ನಲ್ಲಿ ಫಿನ್ ಟೆಕ್ ಸೆಂಟರ್ ಆಫ್ ಎಕ್ಸಲೆನ್ಸ್…
ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್ ಮತ್ತು ಫಿನ್ಸೈಟ್ (ಫೈನಾನ್ಶಿಯಲ್ ಇನ್ಸೈಟ್ ವೆಂಚರ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು) ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನಲ್ಲಿ ಫಿನ್ ಟೆಕ್ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಸ್ಥಾಪಿಸಲು ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಲಾಗಿದೆ.
ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್ ನ ಅಧ್ಯಕ್ಷ ಮಂಜುನಾಥ್ ಭಂಡಾರಿ ಮತ್ತು ಮತ್ತು ಫಿನ್ಸೈಟ್ ವೆಂಚರ್ಸ್ ನ ಅಜಿತ್ ಅರಾನ್ಹಾ ಅವರು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದರು.
ಈ ತಿಳುವಳಿಕೆ ಒಪ್ಪಂದವು ಸಹ್ಯಾದ್ರಿ ಕಾಲೇಜ್ ನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಸಂಶೋಧನೆ, ಇಂಟರ್ನ್ಶಿಪ್ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಲು ಶ್ರಮಿಸಲಿದೆ. ಯುವಕರ ಸೃಜನಶೀಲತೆ ಮತ್ತು ಪ್ರಗತಿಯನ್ನು ಉತ್ತೇಜಿಸುವುದು ಮತ್ತು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೆಚ್ಚಿಸಲು ಸಹಾಯ ಮಾಡುವುದು ಈ ತಿಳುವಳಿಕೆ ಒಪ್ಪಂದದ ಮೂಲಭೂತ ಉದ್ದೇಶವಾಗಿದೆ.
ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನ ಆರ್ & ಡಿ ನಿರ್ದೇಶಕ ಡಾ. ಮಂಜಪ್ಪ ಸಾರಥಿ ಸ್ವಾಗತಿಸಿದರು. ವಿದ್ಯಾರ್ಥಿಗಳಿಗೆ ಕಾಲೇಜು ನೀಡಿದ ಅವಕಾಶವನ್ನು ಅವರು ಶ್ಲಾಘಿಸಿದರು ಮತ್ತು ಉದ್ಯಮದ ಸಹಯೋಗವು ವಿದ್ಯಾರ್ಥಿಗಳಿಗೆ ತಮ್ಮ ಕೌಶಲ್ಯ, ಜ್ಞಾನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದರು.
ಥಿಂಕ್ ಸ್ಟ್ರೀಟ್ ಟೆಕ್ನಾಲಜೀಸ್ ನ ಸಹ-ಸಂಸ್ಥಾಪಕ ಮತ್ತು ನಿರ್ದೇಶಕರಾದ ಉದಯ್ ಬಿರ್ಜೆ ಅವರು ತಿಳುವಳಿಕೆ ಒಪ್ಪಂದದ ವಿವರ ಒದಗಿಸಿದರು ಮತ್ತು ವಿವಿಧ ಉದ್ಯಮಗಳ ಅನುಭವ ಹೊಂದಿರುವ ಸದಸ್ಯರನ್ನು ಫಿನ್ಸೈಟ್ ತಂಡದ ಸದಸ್ಯರನ್ನು ಪರಿಚಯಿಸಿದರು. ಇದು ಕರ್ನಾಟಕದ ಮೊದಲ ಫಿನ್ ಟೆಕ್ ಸಂಸ್ಥೆ ಸಹಯೋಗವಾಗಿದೆ ಎಂದು ತಿಳಿಸಿದರು.
ಸ್ಟಾರ್ಟ್ಅಪ್ ಗಳ ಸ್ವತಂತ್ರ ಸಲಹೆಗಾರರಾದ ಸೂರ್ಯನಾರಾಯಣನ್ ಎ ಅವರು ಫಿನ್ ಟೆಕ್ ಕ್ಷೇತ್ರದಲ್ಲಿನ ವಿಭಿನ್ನ ಅವಕಾಶಗಳ ಕುರಿತು ಮಾತನಾಡಿದರು ಮತ್ತು ನೆಟ್ ವರ್ಕ್ ಗಳನ್ನು ಹೇಗೆ ನಿರ್ಮಿಸುವುದು ಎಂಬುದರ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.
ಸಹ್ಯಾದ್ರಿ ಕಾಲೇಜ್ ನ ಅಧ್ಯಕ್ಷರಾದ ಮಂಜುನಾಥ್ ಭಂಡಾರಿ ಅವರು ತಿಳುವಳಿಕೆ ಒಪ್ಪಂದದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. ಪ್ರಾಧ್ಯಾಪಕರು, ಕಂಪನಿ ಮತ್ತು ವಿದ್ಯಾರ್ಥಿಗಳ ನಡುವಿನ ಕೊಂಡಿಯಾಗಿದ್ದು, ಅವರನ್ನು ತಲುಪಿ ಅವರಿಗೆ ಸ್ಟಾರ್ಟ್ ಅಪ್ ಗಳ ಬಗ್ಗೆ ಮಾಹಿತಿ ನೀಡಬೇಕು. ಈ ಅವಕಾಶದ ಲಾಭವನ್ನು ಪಡೆದುಕೊಳ್ಳುವ ಮೂಲಕ ನಾವು ಸಾಕಷ್ಟು ಮುಂಚಿತವಾಗಿ ತಯಾರಾಗಬೇಕು ಎಂದರು.
ಫಿನ್ಸೈಟ್ ವೆಂಚರ್ಸ್ ನ ಸಹ-ಸಂಸ್ಥಾಪಕರಾದ ಅಜಿತ್ ಅರಾನ್ಹಾ, ದೀಪಕ್ ನರಗುಂದ್ ಮತ್ತು ರೋಶನ್ ಮುಂದ್ರಾ ಅವರು ಫಿನ್ಸೈಟ್ ವೆಂಚರ್ಸ್ ನ ವ್ಯವಹಾರ ಮಾದರಿಯನ್ನು ಪ್ರಸ್ತುತಪಡಿಸಿದರು.
ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನ ಉಪ ಪ್ರಾಂಶುಪಾಲರಾದ ಪ್ರೊ.ಎಸ್.ಎಸ್.ಬಾಲಕೃಷ್ಣ ವಂದಿಸಿದರು. ಶ್ರೀಮತಿ ರಶ್ಮಿ ಭಂಡಾರಿ, ಡೀನ್ ಪ್ಲೇಸ್ಮೆಂಟ್ ಕಾರ್ಯಕ್ರಮವನ್ನು ನಿರೂಪಿಸಿದರು.