ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್ – 19 VTU ರ‍್ಯಾಂಕ್….
ಮಂಗಳೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು (VTU) 2023-24ನೇ ಶೈಕ್ಷಣಿಕ ವರ್ಷಕ್ಕೆ ಇತ್ತೀಚೆಗೆ ಬಿಡುಗಡೆ ಮಾಡಿದ ರಾಂಕ್ ಪಟ್ಟಿಯಲ್ಲಿ ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು 19 ರ‍್ಯಾಂಕ್‌ಗಳನ್ನು ಪಡೆದಿದ್ದಾರೆ.
ರಾಜ್ಯ ಮಟ್ಟದಲ್ಲಿ ಒಂದೇ ಕಾಲೇಜು ಪಡೆದ ಗರಿಷ್ಠ ಸಂಖ್ಯೆಯ ರ‍್ಯಾಂಕ್ ಇದಾಗಿದೆ. ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ (ಡೇಟಾ ಸೈನ್ಸ್) ನ ಶ್ರೀವಿದ್ಯಾ ಮತ್ತು ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ (ಎಐಎಂಎಲ್) ನ ರೇಶಾಲ್ ಕಿರಣ್ ಲೋಬೋ ಅವರು 1ನೇ (ಪ್ರಥಮ) ರ‍್ಯಾಂಕ್ ನ್ನು ಪಡೆದಿದ್ದಾರೆ. 19 ರ ರಾಂಕ್ ಗಳಲ್ಲಿ 9 ಸಿಎಸ್‌ಇ (ಎಐಎಂಎಲ್), 7 ಸಿಎಸ್‌ಇ (ಡೇಟಾ ಸೈನ್ಸ್) ಮತ್ತು 3 ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ ಪಡೆದುಕೊಂಡಿವೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಹ್ಯಾದ್ರಿ ಕಾಲೇಜ್ ಅಧ್ಯಕ್ಷರಾದ ಮಂಜುನಾಥ ಭಂಡಾರಿ , ಕಾರ್ಯದರ್ಶಿ, ಟ್ರಸ್ಟಿಗಳು, ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ,
ಅಭಿನಂದಿಸಿದ್ದಾರೆ.