ಬಂಟ್ವಾಳ ಸಾಹಿತ್ಯ ಸಮಾವೇಶ ೨೦೨೩ ಸರ್ವಾಧ್ಯಕ್ಷರಾಗಿ ಶ್ರೀನಿವಾಸ ಭಟ್ ಸೇರಾಜೆ ಆಯ್ಕೆ…

ಬಂಟ್ವಾಳ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕೈರಂಗಳದಲ್ಲಿ ದ.೧ ರಂದು ನಡೆಯಲಿರುವ ಸಾಹಿತ್ಯ ಸಮಾವೇಶ ೨೦೨೩ ರ ಸರ್ವಾಧ್ಯಕ್ಷರಾಗಿ ಹಿರಿಯ ಕವಿ, ಲೇಖಕ ,ಬಹುಮುಖ ಪ್ರತಿಭೆಯ ಶ್ರೀನಿವಾಸ ಭಟ್ ಸೇರಾಜೆ ಆಯ್ಕೆಯಾಗಿದ್ದಾರೆ.
ಯಕ್ಷಗಾನ ವೇಷಧಾರಿಯಾಗಿ, ತಾಳಮದ್ದಲೆ ಅರ್ಥದಾರಿಯಾಗಿ ಶ್ರೀನಿವಾಸ ಭಟ್ಟರು ಪ್ರಸಿದ್ಧರಾಗಿದ್ದಾರೆ. ಹಲವು ಪ್ರತಿಕೆಗಳಲ್ಲಿ ಸಾವಿರಕ್ಕೂ ಹೆಚ್ಚು ಲೇಖನಗಳು, ಕವನಗಳು ಪ್ರಕಟವಾಗಿವೆ. ಹೊಂಗಿರಣ , ಹೊಂಗನಸು, ದೀಪ ಮೊದಲಾದ ಕೃತಿಗಳು ಪ್ರಕಟಗೊಂಡಿವೆ. ಆಕಾಶವಾಣಿಯಲ್ಲಿ ಭಾವಗೀತೆ, ನಾಟಕ , ಚಿಂತನ ಪ್ರಸಾರಗೊಂಡಿದೆ. ಹೊಸದಿಗಂತ ಹಾಗೂ ಕಲಾದರ್ಶನ ಪ್ರತಿಕೆಗಳಿಗೆ ನಿರಂತರ ೫ ವರ್ಷ ಕಾಲ ಪದಬಂಧ ರಚನೆ ಮಾಡಿ ಸಾಹಿತ್ಯಾಭಿರುಚಿಯನ್ನು ಬೆಳೆಸಿದ್ದಾರೆ. ಇವರ ದೀಪ ಕವನ ಸಂಕಲನಕ್ಕೆ ದಕ್ಷಿಣ ಕನ್ನಡ , ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಪ್ರಥಮ ಬಹುಮಾನ ಲಭಿಸಿದೆ. ಕುಡ್ಪಲ್ತಡ್ಕ ನಿವಾಸಿಯಾಗಿರುವ ಇವರು ರಾಷ್ಟ್ರ ಭಾಷಾ ಪ್ರವೀಣರಾಗಿದ್ದು ನಿವೃತ್ತ ಶಿಕ್ಷಕರು ಆಗಿರುವ ಇವರು ಪ್ರಸ್ತುತ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Sponsors

Related Articles

Back to top button