ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾದಕ ವಸ್ತು ಬಳಕೆ ನಿಷೇಧ ಕುರಿತು ಜಾಗೃತಿ ಕಾರ್ಯಕ್ರಮ…

ಸುಳ್ಯ:ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆ, ಗೂನಡ್ಕ ಇಲ್ಲಿ ‘ಮಾದಕ ವಸ್ತುಗಳ ಬಳಕೆ ನಿಷೇಧ’ ವಿಷಯದ ಕುರಿತಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಜು.24 ರಂದು ಹಮ್ಮಿಕೊಳ್ಳಲಾಗಿತ್ತು.
ವಿಷಯದ ಕುರಿತು ಶಾಲೆಯ ಸಹ ಶಿಕ್ಷಕಿಯಾದ ಆಯಿಷತ್ ಸುನೈನಾ ಇವರು ಮಾತನಾಡುತ್ತ, ಪ್ರಸ್ತುತ ಸಮಾಜದಲ್ಲಿ ಯುವ ಪೀಳಿಗೆ ಮತ್ತು ಅಪ್ರಾಪ್ತ ವಯಸ್ಸಿನ ಶಾಲಾ ಮಕ್ಕಳು ಮಾದಕ ವಸ್ತುವಿನ ಸೇವನೆಗೆ ಪ್ರತ್ಯಕ್ಷವಾಗಿ ಇಲ್ಲವೆ ಪರೋಕ್ಷವಾಗಿ ಬಲಿಯಾಗುತ್ತಿದ್ದು ಅವರ ಅಮೂಲ್ಯವಾದ ಬದುಕಿನ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ನಾಶಪಡಿಸುವಷ್ಟು ಉಲ್ಬಣಿಸುತ್ತಿದೆ. ಮಕ್ಕಳ ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಉಂಟುಮಾಡುವ ಸಮಸ್ಯೆಗಳು ಹಾಗೂ ಇದರ ಬಳಕೆ ಗೆ ಕಾನೂನಿನ ಅಡಿಯಲ್ಲಿ ಇರುವ ಶಿಕ್ಷೆಗಳು ಮತ್ತು ಮಾದಕ ವಸ್ತುವಿನ ಬಳಕೆಯನ್ನು ನಿಯಂತ್ರಿಸುವಲ್ಲಿ ವಿದ್ಯಾರ್ಥಿಗಳ ಜವಾಬ್ಧಾರಿಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸಂಪತ್ ಜೆ.ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ನಿರೂಪಕರಾಗಿ ಅರ್ಪಾನ, ಸ್ವಾಗತ ಭಾಷಣವನ್ನು ಸೈನಾಜ್ ಹಾಗೂ ವಂದನಾರ್ಪಣೆಯನ್ನು ಕೈರುನ್ನೀಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ವೃಂದದವರಾದ ಸಾಧಿಕ ಎ ಕೆ, ಆಯಿಷತ್ ಸಬೀರಾ, ಆಯಿಷತ್ ನೌಫಿಯಾ, ಮುನೀಷಾ, ಆಯಿಷತ್ ನುಸೈಭಾ ಮತ್ತು ಮಹಮ್ಮದ್ ವಾರೀಸ್ ಉಪಸ್ಥಿತರಿದ್ದು, ವಿದ್ಯಾರ್ಥಿಗಳೆಲ್ಲರೂ ಈ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.