ಆಪರೇಷನ್ ಸಿಂಧೂರ ಯಶಸ್ವಿ – ಅಭಿನಂದನಾ ಕಾರ್ಯಕ್ರಮ…
ಸೈನಿಕರಿಗೆ ದೇಶದ ಒಳಿತಿಗೆ ಎಲ್ಲಾ ದೇವಸ್ಥಾನ ಮಸೀದಿ ಚರ್ಚ್ಗಳಲ್ಲಿ ವಿಶೇಷ ಪೂಜೆ- ಟಿ ಎಂ ಶಾಹಿದ್ ತೆಕ್ಕಿಲ್ ಮನವಿ...

ಸುಳ್ಯ: ಆಪರೇಷನ್ ಸಿಂಧೂರ ಮುಖಾಂತರ ಮಾಡಿದ ಕಾರ್ಯಾಚರಣೆ ಯಶಸ್ವಿಯಾಗಿದೆ. ಭಯೋತ್ಪಾದನೆ ಮಟ್ಟ ಹಾಕುವಲ್ಲಿ ಸೈನಿಕರು ಯಶಸ್ವಿಯಾಗಿದ್ದು ಮುಂದೆ ದೇಶದ ಜನರು ಒಟ್ಟಾಗಿ ಇದ್ದು ಎಲ್ಲರು ಅವರವರ ಧರ್ಮದ ಪೂಜಾ ಸ್ಥಳಗಳಲ್ಲಿ ವಿಶೇಷ ಪ್ರಾರ್ಥನೆ ಮಾಡುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಕರೆ ನೀಡಿದರು.
ಸುಳ್ಯ ಬ್ಲಾಕ್ ಯುವಕ ಕಾಂಗ್ರೆಸ್ ವತಿಯಿಂದ ನಡೆದ ವಿಜಯೋತ್ಸವದಲ್ಲಿ ಮಾತನಾಡಿ ದೇಶದ ಎಲ್ಲಾ ಪ್ರಧಾನ ಮಂತ್ರಿಗಳು ಪಾಕಿಸ್ತಾನದ ವಿರುದ್ಧ ಸೈನ್ಯಕ್ಕೆ ಪೂರ್ಣ ಸ್ವತಂತ್ರ ನೀಡಿದ್ದರು. 1971 ಉಕ್ಕಿನ ಮಹಿಳೆ ಪ್ರಧಾನಿ ಇಂದಿರಾ ಗಾಂಧಿ ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆಯಲ್ಲಿ ಬಾಂಗ್ಲಾದೇಶ ಬೇರ್ಪಡಿಸಿದರು. ಮುಂದೆ ದೇಶದ ಜನರು ಒಗ್ಗಟ್ಟಾಗಿ ಪಾಕಿಸ್ತಾನವನ್ನು ಬಗ್ಗು ಬಡಿದು ಭಯೋತ್ಪಾದಕರನ್ನು ಮಟ್ಟಹಾಕಿ ಶಾಶ್ವತ ಪರಿಹಾರ ಮಾಡುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿ, ಸೈನಿಕರನ್ನು ಅಭಿನಂದಿಸಿದರು.
ಯುವಕ ಕಾಂಗ್ರೆಸ್ ಅಧ್ಯಕ್ಷರಾದ ಚೇತನ್ ಕಜೆಗದ್ದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ ಸಿ ಜಯರಾಮ್, ರಾಧಾಕೃಷ್ಣ ಬೊಳ್ಳೂರು,ವೆಂಕಪ್ಪ ಗೌಡ, ಲಕ್ಷ್ಮೀಶ ಗಬ್ಬಲಡ್ಕ , ಗೋಕುಲ್ ದಾಸ್ ಮೊದಲಾದವರು ಮಾತನಾಡಿದರು. ಭವಾನಿ ಶಂಕರ ಕಾರ್ಯಕ್ರಮ ನಿರೂಪಿಸಿದರು. ಸೈನಿಕರಿಗೆ ಮತ್ತು ಭಾರತ ಮಾತೆಗೆ ಜೈಕಾರ ಕೂಗಿ ಕೊನೆಯಲ್ಲಿ ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು. ಸಲೀಂ ಪೆರುಂಗೋಡಿ ಸಿಹಿತಿಂಡಿ ನೀಡಿದರು.