ಟಿ ಎಂ ಶಾಹಿದ್ ತೆಕ್ಕಿಲ್ – ಡಿ ಕೆ ಶಿವಕುಮಾರ್ ಭೇಟಿ…
ಬೆಂಗಳೂರು: ವೋಟ್ ಚೋರ್ ಗದ್ದಿ ಚೋಡ್ ಆಂದೋಲನದ ಅಂಗವಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಹಾಸನ ಉಸ್ತುವಾರಿ ಹಾಗು ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ನೇತೃತ್ವದಲ್ಲಿ ದಕ ಜಿಲ್ಲೆ ಸುಳ್ಯ ಬ್ಲಾಕ್ ನ ಸಂಪಾಜೆ ಗ್ರಾಮ, ಅರಂತೋಡು ಗ್ರಾಮ, ಸುಳ್ಯದಲ್ಲಿ ಮತ್ತು ಪೆರಾಜೆ ಗ್ರಾಮದಲ್ಲಿ ಸಂಗ್ರಹಿಸಿದ 5627 ಜನರ ಸಹಿಯನ್ನು ಕೆಪಿಸಿಸಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಬೆಂಗಳೂರಿನಲ್ಲಿ ಹಸ್ತಾಂತರಿಸಿದರು.





