ಬ್ಲಾಕ್ ಕಾಂಗ್ರೆಸ್ ವತಿಯಿಂದ ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ತೆಕ್ಕಿಲ್ ರಿಗೆ ಸನ್ಮಾನ…

ಸುಳ್ಯಕ್ಕೆ ದೊರೆತ ರಾಜ್ಯ ಮಟ್ಟದ ನಿಗಮ ಮಂಡಳಿ ಅಧ್ಯಕ್ಷತೆಯಿಂದ ಸುಳ್ಯದ ಅಭಿವೃದ್ಧಿ ಪರ್ವ ಕಾಣುವತಾಗಲಿ- ಧನಂಜಯ ಆಡ್ಪಂಗಾಯ...

ಸುಳ್ಯ: ಕರ್ನಾಟಕ ಸರ್ಕಾರ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡ ಟಿ. ಎಂ. ಶಹೀದ್ ತೆಕ್ಕಿಲ್ ರವರನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾಮ್ ವಹಿಸಿದ್ದರು.
ಶಹೀದ್ ರವರನ್ನು ಸನ್ಮಾನಿಸಿ ಮಾತನಾಡಿದ ಕೆಪಿಸಿಸಿ ನಿಕಟ ಪೂರ್ವ ಪ್ರದಾನ ಕಾರ್ಯದರ್ಶಿ ಧನಂಜಯ ಆಡ್ಪಂಗಾಯ ಮಾತನಾಡಿ ಸುಳ್ಯಕ್ಕೆ ರಾಜ್ಯ ಮಟ್ಟದ ನಿಗಮ, ಮಂಡಳಿ ಸ್ಥಾನ ದೊರಕಿಸಿಕೊಟ್ಟ ಕೊಟ್ಟ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ರವರ ಸರಕಾರ ಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಸುಳ್ಯದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭ ವಾಗಲು ಇದು ನಾಂದಿಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಾಧ್ಯಮ ವಕ್ತಾರ ನಂದರಾಜ್ ಸಂಕೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ. ಜೆ. ಸಾಮಾಜಿಕ ಜಾಲ ತಾಣದ ಮುಖ್ಯಸ್ಥ ಸಚಿನ್ ರಾಜ್ ಶೆಟ್ಟಿ, ಭೂ ನ್ಯಾಯ ಮಂಡಳಿ ಸದಸ್ಯ ಮಹಮ್ಮದ್ ಫವಾಜ್, ಇಸ್ಮಾಯಿಲ್ ಪಡ್ಪಿನಂಗಡಿ, ಶಾಫಿ ಕುತ್ತಾಮೊಟ್ಟೆ, ಮಹೇಶ್ ಬೆಳ್ಳಾರ್ಕರ್ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button