ನಾಳೆಯಿಂದ ಸುಳ್ಯ ಪೇಟೆಗೆ ವಾಹನಗಳಿಗೆ ನೋ ಎಂಟ್ರಿ…

ಸುಳ್ಯ: ನಾಳೆಯಿಂದ ಸುಳ್ಯ ಪೇಟೆಗೆ ವಾಹನಗಳ ಪ್ರವೇಶ ಇರುವುದಿಲ್ಲ. ಅಗತ್ಯ ವಸ್ತುಗಳನ್ನು ಸ್ಥಳೀಯವಾಗಿ ಖರೀದಿಸಬೇಕು. ಹಾಗೊಂದು ವೇಳೆ ಸುಳ್ಯಕ್ಕೆ ಬಂದರೆ ಪೇಟೆಗೆ ವಾಹನ ತರದೇ ನಡೆದುಕೊಂಡೆ ಬರಬೇಕಾಗಿದೆ ಎಂದು ಸುಳ್ಯ ಎಸ್.ಐ. ಹರೀಶ್ ತಿಳಿಸಿದ್ದಾರೆ.
ಅಗತ್ಯ ವಸ್ತುಗಳನ್ನು ಸ್ಥಳೀಯ ವಾಗಿ ಖರೀದಿಸಬೇಕೆನ್ನುವುದು ನಿಯಮ. ಆದರೆ ಸುಳ್ಯ ಪೇಟೆಗೆ ಹೆಚ್ಚಿನವರು ಬರುತ್ತಿದ್ದಾರೆ. ಇಲ್ಲಿ ವಾಹನ ಕಂಟ್ರೋಲ್ ಆಗ್ತಾ ಇಲ್ಲ. ಆದ್ದರಿಂದ ನಾಳೆಯಿಂದ ಸುಳ್ಯ ಜ್ಯೋತಿ ಸರ್ಕಲ್, ಗಾಂಧಿನಗರ ಹಾಗೂ ವಿವೇಕಾನಂದ ಸರ್ಕಲ್ ನಲ್ಲಿ ಚೆಕ್ ಪೋಸ್ಟ್ ಹಾಕಿ ಪೇಟೆಗೆ ವಾಹನ ಬರುವುದನ್ನು ತಡೆಯುತ್ತೇವೆ. ಕಳೆದ ಬಾರಿ ಲಾಕ್ ಡೌನ್ ಟೈಮಿನ ನಿಯಮ ಮತ್ತೆ ಜಾರಿಗೊಳಿಸುತ್ತೇವೆ. ಅಗತ್ಯ ವಾಹನಗಳನ್ನು ವಿಚಾರಿಸಿ ಬಿಡುತ್ತೇವೆ. ಹಾಗೊಂದು ವೇಳೆ ಬರಲೇ ಬೇಕೆಂದರೆ ವಾಹನವನ್ನು ನಾವು ತಡೆದಲ್ಲಿ ನಿಲ್ಲಿಸಿ ನಡೆದುಕೊಂಡೇ ಹೋಗಬೇಕು. ಸಾರ್ವಜನಿಕರು ನಮ್ಮೊಡನೆ ಸಹಕಾರ ನೀಡಬೇಕು ಎಂದು ಅವರು ವಿನಂತಿಸಿಕೊಂಡಿದ್ದಾರೆ.