ಸೇವಾ ನಿವೃತ್ತಿಗೊಳ್ಳುತ್ತಿರುವ ಕೆಎಫ್ ಡಿಸಿ ಡಿ. ಎಂ. ಚಿಕ್ಕಮುತ್ತಯ್ಯ ರವರಿಗೆ ಸನ್ಮಾನ ಮತ್ತು ಬೀಳ್ಕೊಡುಗೆ…

ಕಾರ್ಮಿಕರ ಬದುಕಿನಲ್ಲಿ ಮಂದಹಾಸ ಮೂಡಿಸಿದ ಅಧಿಕಾರಿಗಳ ಜೀವನ ಬೆಳಗುತ್ತದೆ - ಕೆ. ಎಂ. ಮುಸ್ತಫ…

ಸುಳ್ಯ: ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ವಿಭಾಗೀಯ ವ್ಯವಸ್ಥಾಪಕರಾಗಿ ಸೇವಾ ನಿವೃತ್ತಿ ಗೊಳ್ಳುತ್ತಿರುವ ಚಿಕ್ಕಮುತ್ತಯ್ಯ ಇವರಿಗೆ ಮಲೆನಾಡು ಚಾರಿಟೇಬಲ್ ಟ್ರಸ್ಟ್, ಕಾರ್ಮಿಕ ವಿಭಾಗ ಮತ್ತು ಕೆ ಎಫ್ ಡಿ ಸಿ ಕಾರ್ಮಿಕರ ವತಿಯಿಂದ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು.
ಈ ಸಮಾರಂಭದಲ್ಲಿ ಮಾತನಾಡಿದ ರೆಡ್ ಕ್ರಾಸ್ ಸುಳ್ಯ ತಾಲೂಕು ಉಪಸಭಾಪತಿ ಕೆ. ಎಂ. ಮುಸ್ತಫ ಅವರು ಚಿಕ್ಕಮುತ್ತಯ್ಯರು ತಮ್ಮ ಸೇವಾವಧಿಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಗೊಳಿಸಿದರು ಎಂದರು.
ಫ್ಯಾಕ್ಟರಿಯಲ್ಲಿ ದುಡಿಯುವವರಿಗೆ ವೇತನ ಹೆಚ್ಚಿಸಿ, ಕಷ್ಟಗಳಿಗೆ ಸ್ಪಂದಿಸಿದರು ಎಂದು ಕಾರ್ಮಿಕ ಸಿಬ್ಬಂದಿ ಗಳು ಕೊಂಡಾಡಿದರು.
ಸನ್ಮಾನ ಸ್ವೀಕರಿಸಿದ ಚಿಕ್ಕಮುತ್ತಯ್ಯರು ಮಾತನಾಡಿ, ಸುಳ್ಯದಲ್ಲಿ ಸೇವೆ ಪ್ರಾರoಬಿಸಿದ ನಾನು ವೃತ್ತಿ ಜೀವನದ ಶೇಕಡಾ 75 ಭಾಗವನ್ನು ಸುಳ್ಯ ದಲ್ಲಿಯೇ ಕಳೆಯಲು ಅವಕಾಶವಾಗಿರುವುದು ನನ್ನ ಸೌಭಾಗ್ಯ. ಅನೇಕ ಸಮಸ್ಯೆಗಳಿಗೆ ಕಾನೂನಿನ ಚೌಕಟ್ಟಿನೊಳಗೆ ಸಹಾಯ ಮಾಡಿರುತ್ತೇನೆ. ಆಧಿಕಾರಿಗಳು, ಕಾರ್ಮಿಕರು ಹೊಂದಾಣಿಕೆಯಿಂದ ದುಡಿದಾಗ ಸಂಸ್ಥೆಯ ಅಭಿವೃದ್ಧಿಗೆ ಪೂರಕ ಎಂದರು.
ರೆಡ್ ಕ್ರಾಸ್ ಸುಳ್ಯ ತಾಲೂಕು ಉಪಸಭಾಪತಿ ಕೆ. ಎಂ. ಮುಸ್ತಫ ಸನ್ಮಾನ ನೆರವೇರಿಸಿದರು.
ಈ ಸಂದರ್ಭದಲ್ಲಿ ನಿಗಮದ ವಲಯಾಧಿಕಾರಿ ಅರುಣ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಖಜಾಂಚಿ ಕೆ. ಬಿ. ಇಬ್ರಾಹಿಂ, ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕ್ಕಾರ್ಸ್, ಅಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲ, ಕೆ ಎಫ್ ಡಿ ಸಿ ಸಿಬ್ಬಂದಿಗಳಾದ ಎಂ. ಎಸ್. ಕುಮಾರ್, ಗಣೇಶ್ ನಾಗಪಟ್ಟಣ, ರಾಮಚಂದ್ರ, ವಿಜಯಕುಮಾರ್, ರಾಜೇಶ್, ರಾಜಕುಮಾರ್, ಚಂದ್ರಶೇಖರ, ವಿಜಯಕುಮಾರಿ, ಧನಲಕ್ಷ್ಮಿ,ಉಮಾ, ದೇವಿ, ರೇವತಿ ಮೊದಲಾದವರು ಉಪಸ್ಥಿತರಿದ್ದರು.

whatsapp image 2023 04 28 at 3.41.57 pm
Sponsors

Related Articles

Back to top button