ಬಂಟ್ವಾಳ ಸಾರ್ವಜನಿಕ ಉದ್ಯೋಗಸ್ಥರ ಸಹಕಾರ ಸಂಘ ಶೇ.22 ಡಿವಿಡೆಂಡ್ ಘೋಷಣೆ…

ಬಂಟ್ವಾಳ ಸೆ. 24 :ಬಂಟ್ವಾಳ ಸಾರ್ವಜನಿಕ ಉದ್ಯೋಗಸ್ಥರ ಸಹಕಾರ ಸಂಘದ 57ನೇ ವರ್ಷದ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಸಂಘದ ಅಧ್ಯಕ್ಷ ಕೆ. ಜಯಂತ ನಾಯಕ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಸಂಘದ ಉಪಾಧ್ಯಕ್ಷ ಕೆ.ಎನ್ ಗಂಗಾಧರ ಆಳ್ವ ಸ್ವಾಗತಿಸಿ ಪ್ರಸ್ತಾವನೆ ಗೈದರು.
2024-25ನೇ ಸಾಲಿನಲ್ಲಿ ಸಂಘವು 22,181.46 ಲಕ್ಷ ವಹಿವಾಟು ನಡೆಸಿ , 47.09 ಲಕ್ಷ ಲಾಭ ಗಳಿಸಿದೆ. ಕೈಕಂಬ, ಮೆಲ್ಕಾರು ಸೂರಿಕುಮೇರು ಮತ್ತು ಮಂಗಳಪದವುವಿನಲ್ಲಿ ಶಾಖೆಗಳನ್ನು ಹೊಂದಿದ್ದು. ಸತತ ಹತ್ತು ವರ್ಷಗಳಲ್ಲಿ ಶೇ 25 ಡಿವಿಡೆಂಡ್ ನೀಡುತ್ತಾ ಬಂದಿದ್ದು ಈ ವರ್ಷ ಶೇ 22 ಡಿವಿಡೆಂಡ್ ಘೋಷಣೆ ಮಾಡಿದೆ.
ಮುಖ್ಯಕಾರ್ಯನಿರ್ವಹಣಾಧಿಕಾರಿ ಗೀತಾ ವಿ. ಹೊಳ್ಳ ವಾರ್ಷಿಕ ವರದಿ ಮಂಡಿಸಿದರು. ಎಸ್.ಎಸ್.ಎಲ್.ಸಿ. ಮತ್ತು ಪಿ.ಯುಸಿ. ಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.
ನಿರ್ದೇಶಕರಾದ ಪದ್ಮನಾಭ ಬಿ., ಉಮಾವತಿ ಶೆಟ್ಟಿ, ಚಂದು ನಾಯ್ಕ , ಸುಬ್ರಾಯ ರಾಮ ಮಡಿವಾಳ್, ಎನ್. ಶಿವಶಂಕರ್ , ಉಷಾ ಪ್ರಭಾಕರ , ಶ್ರೀಧರ ಎನ್., ರವಿಕುಮಾರ್, ಸುನಿಲ್ ಫ್ರಾನ್ಸಿಸ್ ಲೂಯಿಸ್, ರಂಜಿತ್ ಉಪಸ್ಥಿತರಿದ್ದರು.