ಪುತ್ತೂರು ತಾಲೂಕಿನಲ್ಲಿ ಕಸ ತ್ಯಾಜ್ಯದ ಬಗ್ಗೆ ಅರಿವು ಮೂಡಿಸುವ ಬೀದಿನಾಟಕ ಸಮಾರೋಪ…..
ಪುತ್ತೂರು: ದ.ಕ.ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಸ್ವಚ್ಚತೆ ಹಾಗೂ ತ್ಯಾಜ್ಯ ನಿರ್ವಹಣೆಯ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಪಿಂಗಾರ ಕಲಾ ತಂಡದ ವತಿಯಿಂದ ಪುತ್ತೂರು ತಾಲೂಕಿನಾದ್ಯಂತ ನಡೆದ ಬೀದಿ ನಾಟಕದ ಸಮಾರೋ ಸಮಾರಂಭವು ನ.21 ರಂದು ನಗರದ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ನಡೆಯಿತು.
ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ಜನಸಾಮಾನ್ಯರಿಗೂ ಅರ್ಥವಾಗುವಂತೆ ಬೀದಿನಾಟಕದ ಮೂಲಕ ಕಸ ಸಮಸ್ಯೆಯ ಅರಿವನ್ನು ಮೂಡಿಸುವಲ್ಲಿ ಕಲಾವಿದರ ಶ್ರಮ ಪರಿಣಾಮಕಾರಿಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಕಸತ್ಯಾಜ್ಯದ ಬಗ್ಗೆ ಅರಿವು ಹೊಂದಿದಾಗ ಮಾತ್ರ ಈ ಸಮಸ್ಯೆ ಪರಿಹಾರವಾಗಲು ಸಾಧ್ಯ ಎಂದರು. ಸಮಾರೋಪದಲ್ಲಿ ತಾಪಂ ವ್ಯವಸ್ಥಾಪಕ ಶಿವಪ್ರಕಾಶ್ ಅಡ್ಪಂಗಾಯ, ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಟುಪ್ರಸಾದ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದೀನ್ ಸಂಪ್ಯ ಮತ್ತು ಪತ್ರಕರ್ತ ಮೇಘಾ ಪಾಲೆತ್ತಾಡಿ, ಪಿಂಗಾರ ಕಲಾ ತಂಡದ ಸಂಚಾಲಕ ಭರತ್ ಕರ್ಕೇರಾ ಉಪಸ್ಥಿತರಿದ್ದರು.
ಕಸ ಸಮಸ್ಯೆಗಳ ನಿವಾರಣೆಗಾಗಿ ಕಸಗಳ ಬೇರ್ಪಡಿಸುವಿಕೆ. ಹಸಿಕಸ ಮತ್ತು ಒಣಕಸಗಳ ವಿಲೇವಾರಿ, ಕಸಗಳಿಂದ ಉಂಟಾಗುವ ರೋಗ ಇನ್ನಿತರ ಅಪಾಯಗಳ ಕುರಿತು ಬೀದಿ ನಾಟಕ ಕಲಾವಿದರು ಹಾಡು, ನಾಟಕ, ಸಂವಾದಗಳ ಮೂಲಕ ಜಾಗೃತಿ ಮೂಡಿಸಿದರು.
ಪಿಂಗಾರ ಕಲಾ ತಂಡದ ಸದಸ್ಯ ನಾಗರಾಜ್ ಸ್ವಾಗತಿಸಿ, ವಂದಿಸಿದರು.