ಕಡಬ ತಾಲೂಕು ಹೋರಾಟ ಸಮಿತಿಯಿಂದ ಕರ್ನಾಟಕ ಸರ್ಕಾರದ ಅಪಾರ ಮುಖ್ಯ ಕಾರ್ಯದರ್ಶಿ ಭೇಟಿ…

ಕಡಬ: ಕಡಬ ಪ್ರತ್ಯೇಕ ತಾಲೂಕು ಆಗಿ ಐದು ವರ್ಷಗಳು ಕಳೆದರೂ ಇವರೆಗೆ ತಾಲೂಕು ಮಟ್ಟದ ಇಲಾಖೆ ಗಳಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ, ಡಯಾಲಿಸಿಸ್ ವ್ಯವಸ್ಥೆ ಕಾರ್ಯಾರಂಭ ಆಗದಿರುವುದು, ಶಿಕ್ಷಣಾಧಿಕಾರಿಗಳ ಕಚೇರಿ, ಸಬ್ ರಿಜಿಸ್ಟರ್ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಕಚೇರಿ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಕಚೇರಿ, ಸಾರ್ವಜನಿಕ ಬಸ್ ನಿಲ್ದಾಣ, ಲೋಕಪಯೋಗಿ ಇಲಾಖೆ, ಅಗ್ನಿಶಾಮಕ ದಳ ,ಸರ್ಕಾರಿ ಪದವಿ ಕಾಲೇಜ್ ,ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಹಾಗೂ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ, ಪಶು ವೈದ್ಯಕೀಯ ನಿರ್ದೇಶಕರ ಕಚೇರಿ, ಕಡಬದಲ್ಲಿ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿ ,ತಾಲೂಕು, ಆರೋಗ್ಯ ಅಧಿಕಾರಿ ಕಚೇರಿ, ಸರ್ವೆ ಇಲಾಖೆಯ ಉಪನಿರ್ದೇಶಕರ ಕಚೇರಿ ಕಾರ್ಯ ಆರಂಭ ಆಗದೇ ಇರುವುದರ ಬಗ್ಗೆ ಸರಕಾರದ ಅಪಾರ ಮುಖ್ಯ ಕಾರ್ಯದರ್ಶಿ ಅವರು ಹಾಗೂ ಸರಕಾರದ ದ ಕ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರಾದ ಎಲ್ ಕೆ ಆರ್ತಿಕ್ ರವರನ್ನು ಭೇಟಿಯಾಗಿ ಅವರ ಗಮನಕ್ಕೆ ಈ ವಿಚಾರಗಳನ್ನು ತಿಳಿಸಿ ಮನವಿ ಮಾಡಕ್ಕೊಳ್ಳಲಾಯಿತು.
ಈ ಸಮಸ್ಯೆಗಳ ಬಗ್ಗೆ ಸ್ಪಂದಿಸಿರುವ ಸರಕಾರದ ಅಪಾರ ಮುಖ್ಯ ಕಾರ್ಯದರ್ಶಿ ಅವರು ಕೂಡಲೇ ಸಂಬಂಧಪಟ್ಟ ಎಲ್ಲಾ ಇಲಾಖೆಯ ಆಧಿಕಾರಿಗಳಿಗೆ ಸೂಚನೆ ನೀಡಿ ಎಲ್ಲಾ ಇಲಾಖೆಯ ಕಚೇರಿಗಳನ್ನು ಅತಿ ಶೀಘ್ರದಲ್ಲಿ ಪ್ರಾರಂಭಿಸಲು ಕ್ರಮ ಕೈಗೊಳ್ಳುವುದಾಗಿ ನಿಯೋಗಕ್ಕೆ ಭರವಸೆಯನ್ನು ನೀಡಿರುತ್ತಾರೆ.
ನಿಯೋಗದ ನೇತೃತ್ವವನ್ನು ರಾಜ್ಯ ಜನತಾದಳದ ಕಾರ್ಯದರ್ಶಿ ಹಾಗೂ ಕಡಬ ತಾಲ್ಲೂಕು ಹೋರಾಟ ಸಮಿತಿಯ ಸಂಚಾರಕರಾದ ಹಾಜಿ ಸೈಯದ್ ಮಿರಾ ಸಾಹೇಬ್, ಜನತಾದಳ ಜಾತ್ಯಾತೀತ ಪಕ್ಷದ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್ ಎಲಿಮಲೆ, ಕಡಬ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಅಧ್ಯಕ್ಷರಾದ ಅಬ್ದುಲ್ ಜಲೀಲ್ ಬೈತಡ್ಕ ಅಷ್ಪಕ್ ಅಡ್ಡಗದ್ದೆ ಕಡಬ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Back to top button