ಇಂಡಿಯನ್ ರೆಡ್ ಕ್ರಾಸ್ ಸುಳ್ಯ ಘಟಕ ಮತ್ತು ಸುಳ್ಯ ವರ್ತಕ ಸಂಘದ ವತಿಯಿಂದ ಶಾಸಕಿ ಕು. ಭಾಗೀರಥಿ ಮುರುಳ್ಯ ರಿಗೆ ಸನ್ಮಾನ…

ದ ಕ ಜಿಲ್ಲೆಯ 70 ವರ್ಷದ ಇತಿಹಾಸದಲ್ಲಿ 10 ನೇ ಮಹಿಳಾ ಶಾಸಕಿಯಾಗಿ ಇತಿಹಾಸ ನಿರ್ಮಿಸಿದವರು ಭಾಗೀರಥಿ ಮುರುಳ್ಯ - ಪಿ. ಬಿ. ಹರೀಶ್ ರೈ…

ಸುಳ್ಯ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಘಟಕ ಮತ್ತು ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ವತಿಯಿಂದ ಸುಳ್ಯ ವರ್ತಕರ ಸಮುದಾಯ ಭವನದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು
ಅಧ್ಯಕ್ಷತೆ ಯನ್ನು ಸುಳ್ಯ ವರ್ತಕ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ ರೈ ವಹಿಸಿದ್ದರು.
ಜಿಲ್ಲಾ ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ ಪಟ್ಟೆ ಅಭಿನಂದನಾ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ನೆಹರು ಸ್ಮಾರಕ ಮಹಾವಿದ್ಯಾಲಯದ ಪ್ರಾದ್ಯಾಪಕ ಸಂಜೀವ ಕುದ್ಪಾಜೆ, ವರ್ತಕರ ಸಂಘದ ಕಾರ್ಯದರ್ಶಿ ಗಿರೀಶ್ ದೇಂಗೋಡಿ, ರೆಡ್ ಕ್ರಾಸ್ ಕಾರ್ಯದರ್ಶಿ ತಿಪ್ಪೇಶಪ್ಪ, ರೆಡ್ ಕ್ರಾಸ್ ಉಪಸಭಾಪತಿ ಕೆ. ಎಂ. ಮುಸ್ತಫ, ಮಾಜಿ ಜಿ. ಪಂ. ಸದಸ್ಯ ಎಸ್. ಎನ್. ಮನ್ಮಥ, ಎ. ಪಿ. ಎಂ. ಸಿ. ಮಾಜಿ ನಿರ್ದೇಶಕ ಆದಂ ಹಾಜಿ ಕಮ್ಮಾಡಿ, ವರ್ತಕ ಸಂಘದ ಉಪಾಧ್ಯಕ್ಷ ಹಮೀದ್ ಜನತ,ರಾಮಚಂದ್ರ ಭಾರತ್ ಆಗ್ರೋ,ರೆಡ್ ಕ್ರಾಸ್ ಜಿಲ್ಲಾ ಪ್ರತಿನಿಧಿ ಗಣೇಶ್ ಭಟ್, ಶ್ರೀಮತಿ ಪ್ರಮೀಳಾ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button