ಸುಳ್ಯ-ಕಮಲ ರೈ ಗಾಂಧಿನಗರ ನಿಧನ…
ಸುಳ್ಯ: ಗಾಂಧಿನಗರ ನಿವಾಸಿ, ನಿವೃತ್ತ ವನಪಾಲಕ ಕೆ.ನಾರಾಯಣ ರೈ ಅವರ ಪತ್ನಿ ಶ್ರೀಮತಿ ಕಮಲ ರೈ (80) ಇಂದು ಮುಂಜಾನೆ ಅವರ ಸ್ವಗ್ರಹ ಚೈತ್ರ ನಿವಾಸದಲ್ಲಿ ನಿಧನರಾದರು.
ಮೃತರು ಮಕ್ಕಳಾದ ಸುಳ್ಯ ಲಯನ್ಸ್ ಕ್ಲಬ್ ಕಾರ್ಯದರ್ಶಿ ರಾಮಕೃಷ್ಣ ರೈ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಜೆ.ಕೆ ರೈ ಸುಳ್ಯ, ಬೆಂಗಳೂರಿನ ಜಿ.ಈ. ಹೆಲ್ತ್ ಕೇರ್ ಕಂಪೆನಿಯಲ್ಲಿ ಸಾಪ್ಟ್ ವೇರ್ ಇಂಜಿನಿಯರಾಗಿರುವ ಹರಿಕೃಷ್ಣ ರೈ, ಮಗಳು ರಾಜೀವಿ ರೈ ಕಾಟುಕುಕ್ಕೆ ಹಾಗು ಕುಟುಂಬಸ್ಥರು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿರುತ್ತಾರೆ.