ಅಂತರ್ ಕಾಲೇಜು ಈಜು ಚಾಂಪಿಯನ್‌ಷಿಪ್ ಸ್ಪರ್ಧೆ…..
ಪುತ್ತೂರು: ಯಾವುದೇ ಸ್ಪರ್ಧೆಯಲ್ಲಿ ಸೋಲು- ಗೆಲುವು ಮೂಲಕ ಕಲಿತ ಅನುಭವ ಜ್ಞಾನವೇ ಮುಖ್ಯ. ಪಠ್ಯ ಶಿಕ್ಷಣದ ಜತೆಗೆ ದೈಹಿಕ ಸಾಮರ್ಥ್ಯ ಹೆಚ್ಚಿಸುವ, ಬದುಕಿಗೆ ರಕ್ಷಣೆ ನೀಡಬಲ್ಲ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸರ್ವಾಂಗೀಣ ಪ್ರಗತಿ ಹೊಂದಲು ಸಾಧ್ಯ ಎಂದು ಮಂಗಳೂರು ಕಾಲೇಜು ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಡಾ.ಅಪ್ಪಾಜಿ ಗೌಡ ಹೇಳಿದರು.
ಅವರು ಶನಿವಾರ ಪುತ್ತೂರಿನ ಡಾ.ಶಿವರಾಮ ಕಾರಂತ ಬಾಲವನ ಈಜು ಕೊಳದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ನಡೆದ ಅಂತರ್ ಕಾಲೇಜು ಈಜು ಚಾಂಪಿಯನ್‌ಷಿಪ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಶಂಕರ ಪಾಟಾಳಿ ವೈ ಅಧ್ಯಕ್ಷತೆ ವಹಿಸಿದ್ದರು. ರಘುನಾಥ್ ವಿಟ್ಲ, ಡಾ. ಪ್ರಸನ್ನ ಕುಮಾರ್, ಡಾ. ರಾಮಚಂದ್ರ ಕೆ ಅತಿಥಿಗಳಾಗಿದ್ದರು. ಪ್ರಸನ್ನ ಕುಮಾರ್, ಸೌಮ್ಯ ಎಚ್ ಸಭಾ ಕಲಾಪದಲ್ಲಿ ಸಹಕರಿಸಿದರು.