28 ದಿನಗಳವರೆಗೆ ಪಾಸಿಟಿವ್ ಪ್ರಕರಣ ವರದಿಯಾಗದಿದ್ದರೆ ಮಾತ್ರ ಅದು ಕೊರೋನಾ ಮುಕ್ತ ಪ್ರದೇಶ….
ನವದೆಹಲಿ: ಒಂದು ಪ್ರದೇಶದಲ್ಲಿ 28 ದಿನಗಳವರೆಗೆ ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗದಿದ್ದರೆ ಮಾತ್ರ ಅದನ್ನು ಕೊರೋನಾ ಮುಕ್ತ ಪ್ರದೇಶ ಎಂದು ಘೋಷಿಸಲಾಗುವುದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರವಾಲ್ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಕೊರೋನಾ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ ಅವರು,ದೇಶದಲ್ಲಿ 21 ದಿನಗಳ ಲಾಕ್ ಡೌನ್ ಮುಗಿಯುವ ವೇಳೆಗೆ ಕರೋನ ಸೋಂಕಿತರ ಹೆಚ್ಚಾಗಿದ್ದು, ಕಳೆದ 24 ಗಂಟೆಯಲ್ಲಿ 31 ಮಂದಿ ಮೃತಪಟ್ಟಿದ್ದಾರೆ ಮತ್ತು ಒಂದೇ ದಿನ 1211 ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ ಕೊರೋನಾ ಸಾವಿನ ಸಂಖ್ಯೆ 339ಕ್ಕೆ ಮತ್ತು ಸೋಂಕಿತರ ಸಂಖ್ಯೆ 10363ಕ್ಕೆ ಏರಿಕೆಯಾಗಿದೆ ಎಂದರು.
ದೇಶಾದ್ಯಂತ 40 ದಿನಗಳ ಲಾಕ್ ಡೌನ್ ಗೆ ಸಂಬಂಧಿಸಿದಂತೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಲಾವ್ ಅಗರವಾಲ್ ಅವರು, ಒಂದು ನಿರ್ಧಿಷ್ಟ ಪ್ರದೇಶದಲ್ಲಿ 28 ದಿನಗಳವರೆಗೆ ಯಾವುದೇ ಹೊಸ ಪ್ರಕರಣ ಪತ್ತೆಯಾಗದಿದ್ದರೆ ಮಾತ್ರ ನಾವು ಅದನ್ನು ಕೊರೋನಾ ಮುಕ್ತ ಎಂದು ಮತ್ತು ವೈರಸ್ ಹರಡುವುದನ್ನು ಸಂಪೂರ್ಣ ತಡೆಯಲು ಸಾಧ್ಯವಾಯಿತು ಎಂದು ಹೇಳಬಹುದು ಎಂದರು.
ದೇಶಾದ್ಯಂತ ಒಟ್ಟು 602 ಆಸ್ಪತ್ರೆಗಳನ್ನು ಕೊವಿಡ್-19ಗಾಗಿ ಮೀಸಲಿಡಲಾಗಿದೆ. ಈ ಆಸ್ಪತ್ರೆಗಳು 1,06,719 ಪ್ರತ್ಯೇಕ ಹಾಸಿಗೆಗಳ ಸಾಮರ್ಥ್ಯ ಮತ್ತು 12,024 ಐಸಿಯು ಬೆಡ್ ಗಳನ್ನು ಕೊರೋನಾ ರೋಗಿಗಳಿಗೆ ಕಾಯ್ದಿರಿಸಲಾಗಿದೆ ಎಂದು ಲಾವ್ ಅಗರವಾಲ್ ಅವರು ತಿಳಿಸಿದರು.
ಇದುವರೆಗೆ ದೇಶಾದ್ಯಂತ 2, 31902 ಮಂದಿಗೆ ಕೋವಿಡ್ – 19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.