ಚುಟುಕು ಸಾಹಿತ್ಯ ರಚನೆ ಸ್ಪರ್ಧೆ – ವಿದ್ಯಾರ್ಥಿ ಕವಿಗೋಷ್ಠಿ…

ಉಡುಪಿ:ಹೆಬ್ರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಂಧಿನಗರ, ಚಾರದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಒಂದು ದಿನದ ಚುಟುಕು ರಚನಾ ಕಮ್ಮಟವನ್ನು ಏರ್ಪಡಿಸಲಾಗಿತ್ತು. 56 ವಿದ್ಯಾರ್ಥಿಗಳು ಭಾಗವಹಿಸಿ ಚುಟುಕು ರಚನೆ ಮಾಡಿದರು.
ದ.ಕ.ಜಿಲ್ಲಾ ಕಚುಸಾಪ ಅಧ್ಯಕ್ಷ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಾನಂದ ಪೆರಾಜೆ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಚುಟುಕು ಹಾಗೂ ವಚನ ಸಾಹಿತ್ಯದ ಬೆಳವಣಿಗೆ ಹಾಗೂ ಪರಿಣಾಮಗಳ ಬಗ್ಗೆ ಮಾತನಾಡಿದರು. ಕನ್ನಡ ಸಾಹಿತ್ಯದಲ್ಲಿ ಅಭಿರುಚಿ ಹುಟ್ಟಿಸುವ ಕೆಲಸ ಶಿಕ್ಷಕರಿಂದ ಆಗಬೇಕಾಗಿದೆ ಎಂದರು.
18 ವಿದ್ಯಾರ್ಥಿಗಳು ಸ್ವರಚಿತ ಚುಟುಕುಗಳನ್ನು ವಾಚನ ಮಾಡಿ ಮೆಚ್ಚುಗೆ ಗಳಿಸಿದರು. ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಿ ಉಡುಪಿ ಕಚುಸಾಪ ಕಾರ್ಯದರ್ಶಿ ಪ್ರೇಮಾ ಪಾಟೀಲ್ ಅಭಿನಂದಿಸಿ ಮಾತನಾಡಿದರು. ಚುಟುಕು ಕವಿ ಪ್ರೀತಿ ಬಿರಾದಾರ್ ಚುಟುಕು ಸಾಹಿತ್ಯ ರಚನೆಯ ತರಬೇತಿ ನೀಡಿದರು.
ಶಾಲಾ ಮುಖ್ಯೋಪಾಧ್ಯಾಯ ಉಮಾ ಶಂಕರ್ ಸ್ವಾಗತಿಸಿದರು. ಶಿಕ್ಷಕಿ ದೀಪಾ ಸಹಕರಿಸಿ, ಸಹಶಿಕ್ಷಕಿ ವಸಂತಿ ನಿರೂಪಿಸಿ, ವಂದಿಸಿದರು.