ಮಂಗಳೂರಿನಲ್ಲಿ ಪಾಲಿಕೆ ವತಿಯಿಂದ ಕ್ರಿಮಿನಾಶಕ ಸಿಂಪಡನೆ ಕಾರ್ಯ ಆರಂಭ…

ಮಂಗಳೂರು: ಕೊರೊನಾ ವೈರಾಣು ಸೋಂಕು ಹರಡದಂತೆ ನೋಡಿಕೊಳ್ಳಲು ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಮಂಗಳೂರು ಮಹಾನಗರಪಾಲಿಕೆಯು ಸೋಂಕುನಿವಾರಕ ಸಿಂಪಡಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.
ಮುಖ್ಯ ರಸ್ತೆಗಳು, ಒಳ ರಸ್ತೆಗಳು, ಪ್ರಯಾಣಿಕರ ತಂಗುದಾಣ, ಬಸ್ ನಿಲ್ದಾಣ, ವೃತ್ತಗಳು ಸೇರಿದಂತೆ ಎಲ್ಲ ಸಾರ್ವಜನಿಕ ಪ್ರದೇಶಗಳಲ್ಲೂ ಸೋಂಕು ನಿವಾರಕ ಸಿಂಪಡಣೆ ಮಾಡಲಾಗುವುದು. ಇದಕ್ಕಾಗಿ ಒಂದು ಜೆಟ್ಟಿಂಗ್ ಮಷಿನ್ ಹಾಗೂ ನೀರಿನ ಟ್ಯಾಂಕರ್‌ಗಳನ್ನು ಬಳಸಲಾಗುತ್ತಿದೆ. ಅವುಗಳಿಗೆ ವಾಲ್ವ್ ಅಳವಡಿಸಿ, ಡೆಟಾಲ್, ಪಿನಾಯಿಲ್ ಹಾಗೂ ಸ್ಯಾನಿಟೈಜರ್ ಸಲ್ಯೂಷನ್ ಅನ್ನು ನೀರಿನಲ್ಲಿ ಬೆರೆಸಿ ಸ್ಪ್ರೇ ಮಾಡಲಾಗುತ್ತಿದೆ.