ಸಮಸ್ತದ 100 ನೇ ವಾರ್ಷಿಕ ಕಾರ್ಯಕ್ರಮ – ಗಣ್ಯರು ಭಾಗಿ…

ಬೆಂಗಳೂರು: ಸಮಸ್ತದ 100 ನೇ ವಾರ್ಷಿಕ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ಸಮಸ್ತದ ಅಧ್ಯಕ್ಷರಾದ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೊಯ ತಂಗಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬೆಂಗಳೂರಿನಲ್ಲಿ ನಡೆದ ಅತ್ಯಂತ ದೊಡ್ಡ ಸಮ್ಮೇಳನದಲ್ಲಿ ಸಮಸ್ತದ ಮುಶವರ ಸದಸ್ಯರುಗಳು, ಕರ್ನಾಟಕ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮ0ತ್ರಿ ಡಿ ಕೆ ಶಿವಕುಮಾರ್, ಸ್ಪೀಕರ್ ಯು ಟಿ ಖಾದರ್, ಪಾಣಕ್ಕಾಡ್ ಸಾದಿಕ್ ಅಲಿ ಶಿಹಾಬ್ ತಂಘಲ್, ಮಾಜಿ ಕೇರಳ ಸಚಿವ ಪಿ ಕೆ ಕುನ್ಹಲಿಕುಟ್ಟಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಎಂ ಎಲ್ ಸಿ, ಸರಕಾರದ ಚೀಫ್ ವಿಪ್ ಸಲೀಂ ಅಹಮದ್ ಎಂ ಎಲ್ ಸಿ , ಎನ್ ಎ ಹಾರಿಸ್ ಎಂ ಎಲ್ ಎ, ಇನಾಯತ್ ಅಲಿ ಮೂಲ್ಕಿ, ಟಿ ಎಂ ಶಾಹಿದ್ ತೆಕ್ಕಿಲ್ ಸಹಿತ ಹಲವಾರು ಉಲಮಾ ಉಮರ ನಾಯಕರು ಭಾಗವಹಿಸಿದರು.