ಜ.13,14 – ರಂಗಮನೆಯಲ್ಲಿ ಶಾಸ್ತ್ರೀಯ ಸಂಗೀತೋತ್ಸವ…
ಸುಳ್ಯ: ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.) ಸುಳ್ಯ ಇದರ ಆಶ್ರಯದಲ್ಲಿ ಜನವರಿ 14 ರಿಂದ 3 ದಿನ ನಡೆಯಬೇಕಾಗಿದ್ದ ಶಾಸ್ತ್ರೀಯ ಸಂಗೀತೋತ್ಸವ ವನ್ನು ಕೋವಿಡ್ ವೀಕೆಂಡ್ ಕರ್ಪ್ಯೂ ಕಾರಣಕ್ಕಾಗಿ ಜನವರಿ 13 ಮತ್ತು 14 ರಂದು ಸಂಜೆ 6.00 ರಿಂದ 8.00 ರ ವರೆಗೆ ನಡೆಸುವುದೆಂದು ತೀರ್ಮಾನಿಸಲಾಗಿದೆ.
13-01-2022 ರಂದು ಗುರುವಾರ ವಿದ್ವಾನ್ ದಿಂಡೋಡಿ ನಿರಂಜನ್ ಬೆಂಗಳೂರು ಇವರ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಮೈಸೂರು ಸುಮಂತ್ ಮಂಜುನಾಥ್ ಇವರ ವಯಲಿನ್ ಜುಗಲ್ ಬಂದಿ ನಡೆಯಲಿದೆ. ಮೃದಂಗದಲ್ಲಿ ವಿದ್ವಾನ್ ನಿಕ್ಷಿತ್ ಪುತ್ತೂರು ಹಾಗೂ ಘಟಂನಲ್ಲಿ ವಿದ್ವಾನ್ ಶಾಂತಾರಾಜು ಬೆಂಗಳೂರು ಸಹಕರಿಸಲಿದ್ದಾರೆ.
14-01-2022 ರಂದು ಶುಕ್ರವಾರ ಕುಂದಾಪುರದ ವಿದ್ವಾನ್ ರಾಘವೇಂದ್ರ ಉಪಾಧ್ಯಾಯ ಬವಳಾಡಿ ಇವರಿಂದ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ವನ್ನು ಏರ್ಪಡಿಸಲಾಗಿದೆ. ತಬಲದಲ್ಲಿ ವಿದ್ವಾನ್ ಶ್ರೀದತ್ತ ಪ್ರಭು ಹಾಗೂ ಹಾರ್ಮೋನಿಯಂನಲ್ಲಿ ವಿದ್ವಾನ್ ಹೇಮಂತ್ ಕುಮಾರ್ ಮಂಗಳೂರು ಸಹಕರಿಸಲಿದ್ದಾರೆ.
ಸಮಯಕ್ಕೆ ಸರಿಯಾಗಿ ಆರಂಭವಾಗುವ ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಭಾಗವಹಿಸುವ ಎಲ್ಲರಿಗೂ ಕೋವಿಡ್ ನಿಯಮ ಪಾಲನೆ ಕಡ್ಡಾಯವಾಗಿರುತ್ತದೆ ಎಂದು ರಂಗಮನೆಯ ನಿರ್ದೇಶಕ ಜೀವನ್ ರಾಮ್ ಸುಳ್ಯ ತಿಳಿಸಿದ್ದಾರೆ.