ಕಾಂತವರ ಪ್ರಭಾಕರ ರಾವ್ ನಿಧನ…

ಮಂಗಳೂರು :ಕಾಂತವರ ಪ್ರಭಾಕರ ರಾವ್ ( 71) ಇಂದು ಬೆಳಿಗ್ಗೆ 3.30 ಕ್ಕೆ ಮಂಗಳೂರಿನಲ್ಲಿ ನಿಧನರಾದರು.
ಅವರು ಯೂನಿಯನ್ ಬ್ಯಾಂಕ್ ನಿವೃತ್ತ ಉದ್ಯೋಗಿ ಶ್ರೀಮತಿ ಪ್ರಭಾ ಪ್ರಭಾಕರ್, ಓರ್ವ ಪುತ್ರ, ಓರ್ವ ಪುತ್ರಿ, ಸೊಸೆ, ಅಳಿಯ ಮತ್ತು ಮೊಮ್ಮಕ್ಕಳನ್ನು ಆಗಲಿದ್ದಾರೆ.
ಮಂಗಳೂರಿನ ಪ್ರಖ್ಯಾತ M.C.F. ಸಂಸ್ಥೆಯ ಮಾಜಿ ಆಡಳಿತ ನಿರ್ದೇಶಕರಾಗಿದ್ದ ಅವರು ನಿವೃತ್ತಿಯ ಬಳಿಕ ಹಲವು ಸಂಸ್ಥೆಗಳಲ್ಲಿ ತಾಂತ್ರಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಕೊಡುಗೈ ದಾನಿಗಳಾದ ಅವರು ಹಲವಾರು ದೇವಸ್ಥಾನಗಳು, ಸಂಘ ಸಂಸ್ಥೆಗಳ ಉನ್ನತಿಗೆ ಕಾರಣಕರ್ತರಾಗಿದ್ದರು. ಶ್ರೀ ಸುಬ್ರಹ್ಮಣ್ಯ ಸಭಾದ ನಿರ್ದೇಶಕರಾಗಿ, ಪ್ರಸ್ತುತ ಸ್ಥಾನಿಕ ಮಾಹಾಮಂಡಲದ ಉಪಾಧ್ಯಕ್ಷರಾಗಿದ್ದರು.