ದ.ಕ – ಮತ್ತೋರ್ವ ಕೊರೊನಾ ಸೋಂಕಿತ ಬಿಡುಗಡೆ,ಹೊಸ ಪ್ರಕರಣವಿಲ್ಲ…

ಮಂಗಳೂರು: ಕಳೆದ 10 ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣ ದಾಖಲಾಗಿಲ್ಲ. ಈ ನಡುವೆ ಸೋಂಕಿತರು ಬಿಡುಗಡೆಗೊಂಡಿದ್ದಾರೆ.
ಪುತ್ತೂರು ಮೂಲದ ಸೋಂಕಿತ ವ್ಯಕ್ತಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಇಂದು ಬಿಡುಗಡೆಗೊಂಡಿದ್ದಾರೆ. ದುಬೈಯಿಂದ ಪುತ್ತೂರಿಗೆ ಆಗಮಿಸಿದ್ದ ಸುಮಾರು 49 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಂಡುಬಂದಿತ್ತು. ಮಾರ್ಚ್ 21ರಂದು ಅವರು ದುಬೈಯಿಂದ ಮಂಗಳೂರಿಗೆ ಆಗಮಿಸಿದ್ದರು.
ಏಪ್ರಿಲ್ 1ರಂದು ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮಾಡಲಾಗಿದೆ. ನಿರಂತರ ಚಿಕಿತ್ಸೆ ಬಳಿಕ ಇದೀಗ ಅವರು ಗುಣಮುಖರಾಗಿದ್ದು, ಇದೀಗ ನಡೆಸಿರುವ ಪರೀಕ್ಷೆಗಳಲ್ಲಿ ನೆಗೆಟಿವ್ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಇಂದು ಬಿಡುಗಡೆಗೊಳಿಸಲಾಗಿದೆ.