ನಾವೂರು ಜಂಕ್ಷನ್ ಅಭಿವೃದ್ಧಿಗೆ ಚಾಲನೆ ನೀಡಿದ ಸ್ಥಳೀಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ…
ಸುಳ್ಯ: ನಾವೂರು ವಾರ್ಡಿನ ವಿವಿಧ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ರಚನೆ ಮತ್ತು ಇಂಟರ್ ಲಾಕ್ ಅಳವಡಿಕೆ ಕಾಮಗಾರಿಗೆ ಅಧಿಕೃತ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯರಾದ ನಾವೂರು ವಾರ್ಡ್ ಬೂತ್ ಅಧ್ಯಕ್ಷರಾದ ಹನೀಫ್ ಬೀಜಕೊಚ್ಚಿ, ನಗರ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ ನೀರಬಿದಿರೆ, ಶೀಲಾ ಕುರುಂಜಿ, ಹಿರಿಯರಾದ ಖಾದರ್ ಬೊಂಡ, ಮಜೀದ್,ಇಸ್ಮಾಯಿಲ್ ಕುಂಬ್ಳೆಕಾರ್ಸ್, ಅಬ್ದುಲ್ಲ, ಆಶಿಮ್ ಕಟ್ಟೆಕ್ಕಾರ್, ರಶೀದ್ ನಾವೂರು, ಚಂದ್ರಶೇಖರ್, ಶಾಫಿ ನಾವೂರು, ನಾರಾಯಣ ಪಾಟಾಳಿ, ಅಬ್ದುಲ್ ಲತೀಫ್ ಎಂ. ಟಿ, ಹನೀಫ, ಇನ್ನಿತರರು ಉಪಸ್ಥಿತರಿದ್ದರು.




