ಸುಳ್ಯ – ಮಿಸೆಸ್ ಇಂಡಿಯಾ ಐ ಅ್ಯಮ್ ಪವರ್ ಫುಲ್ ಏಷ್ಯಾ – 2021 ಆಗಿ ಸುಪ್ರೀತಾ ಕೆ.ಎಸ್…
ಸುಳ್ಯ: ಸುಳ್ಯದ ಬ್ಯಾಂಕ್ ಆಫ್ ಬರೋಡಾ ಉದ್ಯೋಗಿಯಾಗಿರುವ ಸುಳ್ಯ ಬೀರಮಂಗಲ ನಿವಾಸಿ ಶ್ರೀಮತಿ ಸುಪ್ರೀತಾ ಕೆ.ಎಸ್. ರವರು ಮಿಸೆಸ್ ಇಂಡಿಯಾ ಐ ಅ್ಯಮ್ ಪವರ್ ಫುಲ್ ಏಷ್ಯಾ – 2021 ಆಗಿ ಆಯ್ಕೆಯಾಗಿದ್ದು ಸೌಂದರ್ಯ ಸ್ಪರ್ಧೆಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಈ ಸೌಂದರ್ಯ ಸ್ಪರ್ಧೆ ಸೆ. 28 ಮತ್ತು 29 ರಂದು ಸ್ವೆರ್ಲಿಂಗ್ ಅಥರ್ವ ಜೈಪುರ ಹೋಟೆಲ್ ನ ಸಭಾಂಗಣದಲ್ಲಿ
ನಡೆಯಿತು. ಮಿಸೆಸ್ ಇಂಡಿಯಾ ಸೌತ್ ವಿಭಾಗದಲ್ಲಿ ನಂದಿನಿ ನಾಗರಾಜ್ ಮತ್ತು ನಾರ್ತ್ ನಲ್ಲಿ ಜಸ್ಟ್ರೀತ್ ಇವರಿಬ್ಬರು ಸೇರಿ ಆಯೋಜಿಸಿದ್ದ ಈ ಮಿಸೆಸ್ ಇಂಡಿಯಾ ಐ.ಆ್ಯಮ್ ಪವರ್ಫುಲ್ ಏಷ್ಯಾ 2021ರ ಏಷ್ಯಾ ವಿಭಾಗದಲ್ಲಿ ಸುಪ್ರೀತಾ ಕೆ.ಎಸ್. ರವರು ಸೌಂದರ್ಯರಾಣಿಯಾಗಿ ಆಯ್ಕೆಯಾಗಿದ್ದಾರೆ. ಇವರು ಸಿಂಗಾಪುರದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಶ್ರೀಮತಿ ಸುಪ್ರೀತಾ ಕೆ ಎಸ್ ರವರು ಸುಳ್ಯ ಬೀರಮಂಗಲದ ನಿವಾಸಿಯಾಗಿರುವ ಕೆವಿಜಿ ಇಂಜಿನಿಯರಿಂಗ್ ಕಾಲೇಜ್
ಉಪನ್ಯಾಸಕ ಅಜಿತ್ ಬಿ.ಟಿ. ಅವರ ಪತ್ನಿ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಸೂರ್ಯಕಲಾ ತ್ರಿವಿಕ್ರಮ ರಾವ್ ಅವರ ಸೊಸೆ.
ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಉದ್ಯೋಗಿಯಾಗಿರುವ ಪುತ್ತೂರು ನಿವಾಸಿ ಕೆ. ಸುರೇಶ್ ಹಾಗೂ ಸವಿತಾ ಸುರೇಶ್ ದಂಪತಿಯ
ಪುತ್ರಿಯಾಗಿರುವ ಶ್ರೀಮತಿ ಸುಪ್ರೀತಾ ಉಡುಪಿಯಲ್ಲಿ ಪ್ರೌಢ ಹಾಗೂ ಪಿಯುಸಿ ಶಿಕ್ಷಣ ಪೂರೈಸಿ ಪುತ್ತೂರಿನ ವಿವೇಕಾನಂದ
ಕಾಲೇಜಿನಲ್ಲಿ ಬಿ.ಬಿ.ಎಂ. ಪದವಿ ಪಡೆದರು. ಬಳಿಕ ವಿಜಯ ಬ್ಯಾಂಕ್ ಉದ್ಯೋಗಿಯಾಗಿ ಸೇರ್ಪಡೆಗೊಂಡರು.
8 ವರ್ಷದ ಪುತ್ರ ಇಶಾನ್ ತಾಯಿಯಾಗಿರುವ ಸುಪ್ರೀತಾ ಈಗ ಕೋಡ್ಲ ಗಣಪತಿ ಭಟ್ಟರ ಮಾರ್ಗದರ್ಶನದಲ್ಲಿ ಯಕ್ಷಗಾನ
ಅಭ್ಯಾಸ ನಡೆಸುತ್ತಿದ್ದಾರೆ. ಇವರು ಕಳೆದ ವರ್ಷ ನಡೆದ ಮಿಸೆಸ್ ಕರ್ನಾಟಕ- 2020 ಮತ್ತು ಮಿಸೆಸ್ ಸೌತ್ ಇಂಡಿಯಾ ಐ ಆಮ್ ಪವರ್ ಫುಲ್ 2021 ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು.