ಸುಳ್ಯ ತಹಶೀಲ್ದಾರ್ ಕು. ಅನಿತಾ ಲಕ್ಷ್ಮಿ ಯವರಿಗೆ ಇಂಡಿಯನ್ ರೆಡ್ ಕ್ರಾಸ್ ಘಟಕ ವತಿಯಿಂದ ಬೀಳ್ಕೊಡುಗೆ…

ಸುಳ್ಯದಲ್ಲಿ ತಹಸೀಲ್ದಾರರಾಗಿ ಸೇವೆ ತೃಪ್ತಿ ತಂದಿದೆ - ಅನಿತಾಲಕ್ಷ್ಮಿ…

ಸುಳ್ಯ:ಎರಡೂವರೆ ವರ್ಷಗಳಿಂದ ಸುಳ್ಯದಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿರುವುದು ನನಗೆ ಅತೀವ ತೃಪ್ತಿತಂದಿದೆ. ಜೀವನದಲ್ಲಿ ಮತ್ತು ಸರಕಾರಿ ಸೇವೆಯಲ್ಲಿ ದೊಡ್ಡ ಅನುಭವವನ್ನು ಪಡೆದಿದ್ದೇನೆ. ಇಲ್ಲಿನ ಜನರು, ಜನಪ್ರತಿನಿಧಿಗಳು, ಎಲ್ಲಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಮಾಧ್ಯಮಗಳು ನೀಡಿದ ಸಹಕಾರ ಜೀವನ ದಲ್ಲಿ ಅವಿಸ್ಮರಣೀಯ. ಕೊರೋನ ಮಹಾಮಾರಿ,ಪ್ರಾಕೃತಿಕ ವಿಕೋಪ, ಕೋಮು ಉದ್ವಿಗ್ನತೆ ಮೊದಲಾದ ಸವಾಲುಗಳನ್ನು ಎದುರಿಸಿ ನನ್ನ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ನಿಭಾಯಿಸಿರುತ್ತೇನೆ. ನಿಮ್ಮಿಂದ ಆತ್ಮೀಯವಾಗಿ ಬೀಳ್ಕೊಡುತ್ತಿರುವುದು ಸುಳ್ಯ ದೊಂದಿಗೆ ನನ್ನ ಸಂಬಂಧ ವನ್ನು ಇನ್ನಷ್ಟು ಗಟ್ಟಿಯಾಗಿಸಿದೆ ಎಂದು ಸುಳ್ಯ ತಹಸೀಲ್ದಾರ್ ಕು. ಅನಿತಾ ಲಕ್ಷ್ಮಿ ಹೇಳಿದ್ದಾರೆ.
ಇಂಡಿಯನ್ ರೆಡ್ ಕ್ರಾಸ್ ಸುಳ್ಯ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ತಮ್ಮ ಅನಿಸಿಕೆ ಹಂಚಿಕೊಂಡರು.
ಸುಳ್ಯ ಜನತೆ ತೋರಿದ ಪ್ರೀತಿ, ವಿಶ್ವಾಸ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಸಿಗುವ ಪದವಿಗಿಂತ ಮಿಗಿಲಾಗಿದೆ ಎಂದು ಭಾವುಕ ರಾಗಿ ಭಾಷಣ ನಿಲ್ಲಿಸಿದರು.
ಸಭಾಧ್ಯಕ್ಷತೆಯನ್ನು ಇಂಡಿಯನ್ ರೆಡ್ ಕ್ರಾಸ್ ಸುಳ್ಯ ಘಟಕದ ಸಭಾಪತಿ ಪಿ. ಬಿ. ಸುಧಾಕರ್ ರೈ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಸುಳ್ಯ ದಲ್ಲಿ ಸರಕಾರ ದ ಜನಪರ ಕಾರ್ಯಕ್ರಮಗಳನ್ನು
ಸಮರ್ಪಕವಾಗಿ ಜನರಿಗೆ ತಲುಪಿಸಿದ ಅನಿತಾಲಕ್ಷ್ಮಿಯವರು ರಕ್ತದಾನ ಶಿಬಿರ,ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ನೆರವಾಗುವ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸುಳ್ಯ ಘಟಕವನ್ನು ಪುನರುಜ್ಜೀವನಗೊಳಿಸಿ, ಕ್ರೀಯಾ ಶೀಲ ವಾಗುವಂತೆ ಮಾಡಿದ ಕೀರ್ತಿ ಇಂಡಿಯನ್ ರೆಡ್ ಕ್ರಾಸ್ ನ ಪದ ನಿಮತ್ತ ಅಧ್ಯಕ್ಷ ಅನಿತಾ ಲಕ್ಶ್ಮಿ ಯವರಿಗೆ ಸಲ್ಲುತ್ತದೆ ಎಂದರು

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸುಳ್ಯ ಘಟಕದ ಉಪಸಭಾಪತಿ ಕೆ. ಎಂ. ಮುಸ್ತಫ ಅಭಿನಂದನಾ ಭಾಷಣಗೈದರು.
ಈ ಸಂದರ್ಭದಲ್ಲಿ ಸುಳ್ಯ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಗಿರೀಶ್ ಡಿ. ಎಸ್ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ,ಇಂಡಿಯನ್ ರೆಡ್ ಕ್ರಾಸ್ ಸುಳ್ಯ ಘಟಕದ ಕೋಶಾಧಿಕಾರಿ ವಿನಯ್ ಕುಮಾರ್, ನಿರ್ದೇಶಕರುಗಳಾದ ಶ್ರೀಮತಿ ಪದ್ಮಿನಿ,ಪೃಥ್ವಿ ಕುಮಾರ್, ಸಂಜೀವ ಕುತ್ಪಾಜೆ,ಜಿಲ್ಲಾ ಪ್ರತಿನಿಧಿ ಗಣೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರುಪ್ರದಾನ ಕಾರ್ಯದರ್ಶಿ ತಿಪ್ಪೇಶಪ್ಪ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

whatsapp image 2023 03 03 at 11.14.01 am
Sponsors

Related Articles

Back to top button