ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗಳಿ – ಗೀತ ಸಾಹಿತ್ಯ ಸಂಭ್ರಮ…

ಬಂಟ್ವಾಳ: ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗಳಿಯ ಸಜೀಪ ಮುನ್ನೂರು ಬ್ರಹ್ಮ ಕಲಶ ದಿನಾಚರಣೆ ಅಂಗವಾಗಿ ಫೆ. 27 ರಂದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲ್ಲಡ್ಕ ವಿಠಲ್ ನಾಯಕ್ ಮತ್ತು ಬಳಗದವರಿಂದ ಗೀತ ಸಾಹಿತ್ಯ ಸಂಭ್ರಮ ಹಮ್ಮಿಕೊಳ್ಳಲಾಗಿತ್ತು.
ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತಾಯ, ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ವೇದಮೂರ್ತಿ ಎನ್ ಶಿವರಾಮ ಮಯ್ಯ, ಹರಿಪ್ರಸಾದ್ ಭಂಡಾರಿ, ಎಂ ಕೆ ಶಿವ, ದೀಕ್ಷಿತ್ ಶೆಟ್ಟಿ, ಶ್ರೀನಿವಾಸ್ ನಾಯಕ್, ರಾಜು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಪುಣ್ಯ ಪಂಚಗವ್ಯ ಶ್ರೀ ಚಂಡಿಕಾ ಹವನ, ಗಣ ಹೋಮ ಫಲಪಂಚಾಮೃತ ಅಭಿಷೇಕ, ಪವಮಾನ ಸೂಕ್ತ ಅಭಿಷೇಕ ನಾಗತಂಬಿಲ, ಅನ್ನದಾನ, ಭಜನಾ ಕಾರ್ಯಕ್ರಮ ವಿದ್ಯುಕ್ತವಾಗಿ ಜರಗಿತು.