ಸೈಕಲ್ ನಲ್ಲಿ ದೇಶ ಪರ್ಯಟನೆಗೆಯ್ಯು ತ್ತಿರುವ ಚಾರ್ಲ್ ಅನಬು – ಮಲೆನಾಡು ಚಾರಿಟೇಬಲ್ ಟ್ರಸ್ಟ್ ಸ್ವಾಗತ…
ಸುಳ್ಯ: ಪರಿಸರ ಜಾಗೃತಿಗಾಗಿ ಶಿಕ್ಷಕ ವೃತ್ತಿ ತೊರೆದು ಸೈಕಲ್ ನಲ್ಲಿ ದೇಶ ಪರ್ಯಟನೆಗೆಯ್ಯು ತ್ತಿರುವ ಚಾರ್ಲ್ ಅನಬು ರವರಿಗೆ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಳ್ಯದಲ್ಲಿ ಸ್ವಾಗತ ಕೋರಲಾಯಿತು.
“ಸೈಕಲ್ ಬಳಸಿ ಪರಿಸರ ಉಳಿಸಿ” ಧ್ಯೇಯವಾಕ್ಯದೊಂದಿಗೆ ದೇಶ ಪರ್ಯಟನೆಗೆಯ್ಯು ತ್ತಿರುವ 65 ವರ್ಷದ ಅವಿವಾಹಿತನ ಈ ಸಾಧನೆಗೆ ಯೂಟ್ಯೂಬಿನ ವೀಕ್ಷಕರು ಫಿದಾ ಆಗಿದ್ದಾರೆ.
ತಮಿಳುನಾಡಿನ ನಾಮಕಲ್ ನಿವಾಸಿ 65 ವರ್ಷ ಪ್ರಾಯದ ಅವಿವಾಹಿತ ಚಾರ್ಲ್ ಅನುಬು ಕಳೆದ ಏಳು ವರ್ಷಗಳಿಂದ ಸೈಕಲ್ ಮೂಲಕ 20 ರಾಜ್ಯದಲ್ಲಿ ಸಂಚರಿಸಿ ವಿವಿಧ ಶಾಲೆಗಳಿಗೆ ಭೇಟಿಕೊಟ್ಟು 60 ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ಗಳನ್ನು ಸೈಕಲ್ ನಲ್ಲಿ ಕ್ರಮಿಸಿ, ಸುಳ್ಯ ಕ್ಕೆ ಆಗಮಿಸಿದಾಗ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ವಾಗತಿಸಲಾಯಿತು.
ಪರಿಸರ ಮಾಲಿನ್ಯ ಜಾಗೃತಿಯನ್ನು ಮೂಡಿಸಲು ಯಾತ್ರೆ ಮಾಡುತ್ತಿರುವ ಇವರು ಪರ್ಯಟನೆ ಬಗ್ಗೆ ವಿವರ ನೀಡಿ, ಈಗಾಗಲೇ 20 ರಾಜ್ಯಗಳಲ್ಲಿ ಪರ್ಯಟನೆ ಮುಗಿಸಿ ವಿವಿಧ ಶಾಲೆಗಳಿಗೆ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಪರಿಸರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ. 25 ವರ್ಷಗಳ ಹಿಂದೆ ಉಚಿತವಾಗಿ ಪ್ರಕೃತಿಯಿಂದ ದೊರೆಯುತ್ತಿದ್ದ ಕುಡಿಯುವ ನೀರು ಇಂದು ಲೀಟರಿಗೆ 20 ರೂಪಾಯಿ ಕೊಟ್ಟು ಕುಡಿಯುವಂತಹ ಸ್ಥಿತಿ ಬಂದಿದೆ. ಪ್ರಕೃತಿಯ ಮೇಲೆ ಮನುಷ್ಯ ಮಾಡುವ ಅತ್ಯಾಚಾರ ಇದೇ ರೀತಿ ಮುಂದುವರಿದರೆ ಭವಿಷ್ಯ ಊಹಿಸಲು ಅಸಾಧ್ಯ. ಇಂದಿನ ಜಾಗತಿಕ ಉಷ್ಣಾಂಶ ಮನುಷ್ಯನ ರೋಗಗಳಿಗೆ ಮತ್ತು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮುಂದಿನ ಜನಾಂಗವನ್ನು ರಕ್ಷಿಸಲು ನಾವು ಕಟಿಬದ್ಧರಾಗಿ ಬೇಕಾಗಿದೆ ಎಂದ ಅವರು ನೇಪಾಳ ಗಡಿಯಲ್ಲಿ ಸಂಚರಿಸುವಾಗ ನಕ್ಸಲರ ಕಹಿಘಟನೆ ಬಿಟ್ಟರೆ ಎಲ್ಲಿಯೂ ಭಾಷೆ, ಆಹಾರ ತೊಡಕಾಗಲಿಲ್ಲ, ಎಲ್ಲವೂ ನಿರಾತಂಕ ಅನ್ನುತ್ತಾರೆ ಅನ್ಬು.
ಇನ್ನು ಎಂಟು ರಾಜ್ಯ ಗಳ ಪ್ರವಾಸದೊಂದಿಗೆ ದೇಶ ಪರ್ಯಟನೆ ಮಾಡಿದಂತಹ ಹೆಗ್ಗಳಿಕೆ ಪಾತ್ರರಾಗುವ ಅನ್ಬುರವರಿಗೆ ಶುಭ ಹಾರೈಸಲಾಯಿತು. ಈ ಸಂದರ್ಭದಲ್ಲಿ ಮಲೆನಾಡು ಚಾರಿಟೇಬಲ್ ಅಧ್ಯಕ್ಷ ರಿಯಾಜ್ ಕಟ್ಟೆಕ್ಕಾರ್ಸ್, ಸುಳ್ಯ ನಗರ ಪಂಚಾಯಿತಿ ಮಾಜಿ ಸದಸ್ಯ ಕೆ. ಎಂ. ಮುಸ್ತಫ, ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಜೈನ್, ಉದ್ಯಮಿ ಸಿದ್ದಿಕಿ ಕೊಕ್ಕೋ, ರಾಷ್ಟ್ರೀಯ ಭೌಗೋಳಿಕ ಸರ್ವೆ ಇಲಾಖೆಯ ರಾಜೀವ್ ಕಿಸ್ಕೊ ಮುಂಬೈ, ಉದ್ಯಮಿ ಎಂ ಕೆ ಅಬ್ದುಲ್ ಲತೀಫ್, ಅಬ್ದುಲ್ಲ ಮೇಸ್ತ್ರಿ ಮೊದಲಾದವರು ಉಪಸ್ಥಿತರಿದ್ದರು.