ಪೆರಾಜೆಯಲ್ಲಿ ಶ್ರೀವರಮಹಾಲಕ್ಷ್ಮೀ ವ್ರತ , ರಕ್ಷಾ ಬಂಧನ ಆಚರಣೆ…

ಬಂಟ್ವಾಳ:ಶ್ರೀಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಪೆರಾಜೆ ಇದರ ವತಿಯಿಂದ ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ 17ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ ಮತ್ತು ರಕ್ಷಾ ಬಂಧನ ಉತ್ಸವ ಜರಗಿತು.
ಶ್ರೀರಾಮ ಪ್ರೌಢಶಾಲೆ ಶಿಕ್ಷಕಿ ಸೌಮ್ಯ ಧಾರ್ಮಿಕ ಉಪನ್ಯಾಸ ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಗುಡ್ಡಚಾಮುಂಡೇಶ್ವರಿ ಸೇವಾಟ್ರಸ್ಟ್ ಅಧ್ಯಕ್ಷ ಮಾಧವ ಕುಲಾಲ್, ಕಾರ್ಯದರ್ಶಿ ರಾಘವ ಗೌಡ ,ಉಮೇಶ್ ಎಸ್.ಪಿ. , ಹರೀಶ್ ರೈ ಪಾಣೂರು ಸಹಕರಿಸಿದರು.
ಮಹಿಳಾ ಸೇವಾ ಸಮಿತಿಯ ಗೌರವಾಧ್ಯಕ್ಷೆ ಸುಂದರಿ ರೈ, ಗೌರವ ಸಲಹೆಗಾರರು ಪನಿಪ ಮಾಧವ, ಅಧ್ಯಕ್ಷೆ ಮೀನಾಕ್ಷಿ ರಾಘವ ಗೌಡ, ಕಾರ್ಯದರ್ಶಿ ಧನಲಕ್ಷ್ಮಿ, ಉಪಾಧ್ಯಕ್ಷೆ ರಾಜೀವಿ ಬಡೆಕೋಡಿ, ಅಮಿತ ಅನಿಲ್, ಜೊತೆಕಾರ್ಯದರ್ಶಿ ರೋಹಿಣಿ , ರೇವತಿ, ಕೋಶಾಧಿಕಾರಿ ಭಾರತಿ ಜಯಾನಂದ ಪೆರಾಜೆ, ಸಂಘಟನಾ ಕಾರ್ಯದರ್ಶಿ ರತ್ನ ಮಂಜೊಟ್ಟಿ ಇದ್ದರು.
ಶಶಿಕುಮಾರಿ , ಮಮತಾ , ಗುಲಾಬಿ, ಮಮತ ಮಿತ್ತಪೆರಾಜೆ, ಗೀತಾ, ಸುಧಾ, ಲತಾ, ಚಂದ್ರಕಲಾ, ಲೀಲಾವತಿ , ಭಾರತಿ ಕೆ., ಗೀತಾ ಉಮೇಶ್ ,ರಾಜೀವಿ ಜೊಗಿಬೆಟ್ಟು ಮೊದಲಾದವರು ವ್ಯವಸ್ಥೆಗೊಳಿಸಿದ್ದರು.