ಕ.ಚು.ಸಾ.ಪ ಬಂಟ್ವಾಳ ಅಧ್ಯಕ್ಷರಾಗಿ ರವೀಂದ್ರ ಕುಕ್ಕಾಜೆ ಆಯ್ಕೆ…

ಬಂಟ್ವಾಳ:ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಹುಬ್ಬಳ್ಳಿ ಇದರ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷರಾಗಿ ನ್ಯಾಯವಾದಿ ರವೀಂದ್ರ ಕುಕ್ಕಾಜೆ ಆಯ್ಕೆಯಾಗಿದ್ದಾರೆ ಎಂದು ಕ.ಚು.ಸಾ.ಪ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಪ್ರಕಟಿಸಿದ್ದಾರೆ.
ಕುಕ್ಕಾಜೆಯವರು ಕಾನೂನು ಪದವಿ ಪಡೆದ ಬಳಿಕ ಕಳೆದ 20 ವರ್ಷಗಳಿಂದ ಬೆಂಗಳೂರು, ಮಂಗಳೂರು, ಬಂಟ್ವಾಳದಲ್ಲಿ ವಕೀಲಿ ವೃತ್ತಿಯನ್ನು ಮಾಡುತ್ತಿದ್ದಾರೆ. ಬಂಟ್ವಾಳ ತಾಲೂಕು ಕ.ಸಾ.ಪ. ಇದರ ಗೌರವ ಕಾರ್ಯದರ್ಶಿಯಾಗಿ ವಿವಿಧ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಂಟ್ವಾಳ ಸೀನಿಯರ್ ಛೇಂಬರ್ ಘಟಕದ ಉಪಾಧ್ಯಕ್ಷರಾಗಿದ್ದು, ಹಲವಾರು ಕವಿಗೋಷ್ಠಿಗಳಲ್ಲಿ ವಿಚಾರ ಗೋಷ್ಠಿಗಳಲ್ಲಿ ಕಾನೂನು ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ಶಿಬಿರಗಳನ್ನು ನಡೆಸಿಕೊಡುತ್ತಿದ್ದಾರೆ.