ಸಂಪಾಜೆ ಗೂನಡ್ಕ ಪೇರಡ್ಕ ಜುಮ ಮಸೀದಿಗೆ ವಖ್ಫ್ ಇಲಾಖೆಯಿಂದ ಐದು ಲಕ್ಷ್ಮ ಬಿಡುಗಡೆ…

ಸುಳ್ಯ: ಸುಳ್ಯ ತಾಲ್ಲೂಕು ಸಂಪಾಜೆ ಗ್ರಾಮದ ಅತ್ಯಂತ ಪುರಾತನ ಇತಿಹಾಸ ಪ್ರಸಿದ್ಧ ಗೂನಡ್ಕ ಪೇರಡ್ಕ ಮೋಹಿಯುದ್ದಿನ್ ಜುಮಾ ಮಸೀದಿ ನವೀಕರಣಕ್ಕೆ ಕರ್ನಾಟಕ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಬರುವ ವಖ್ಫ್ ಇಲಾಖೆಯಿಂದ ವಸತಿ ಹಾಗು ವಖ್ಫ್ ಸಚಿವರಾದ ಜಮೀರ್ ಅಹಮದ್ ಖಾನ್ ಅವರು ಐದು ಲಕ್ಷ ರುಪಾಯಿಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗು ಗೂನಡ್ಕ ಪೇರಡ್ಕ ಮೋಹಿಯುದ್ದಿನ್ ಜುಮ ಮಸ್ಜಿದ್ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅವರ ಶಿಫಾರಸ್ಸಿನ ಮೇರೆಗೆ ಬಿಡುಗಡೆ ಗೊಳಿಸಿದ್ದಾರೆ ಎಂದು ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಎಂ ಆರ್ ಡಿ ಎ ಗೂನಡ್ಕ ಇದರ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ ತಿಳಿಸಿದ್ದಾರೆ.
ಸಂಪಾಜೆ ಗ್ರಾಮದ ಸಹಿತ ಸುಳ್ಯದ ಹಲವಾರು ಮಸೀದಿ ಮದರಸ ಗಳಿಗೆ ಹಣ ಬಿಡುಗಡೆ ಮಾಡಲು ಸಹಕರಿಸಿದ ಸಚಿವ ಜಮೀರ್ ಅಹಮದ್ ಖಾನ್ ಹಾಗು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಹಾಗು ಗೂನಡ್ಕ ಪೇರಡ್ಕ ಮಸೀದಿಯ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅವರನ್ನು ಜಿ ಕೆ ಹಮೀದ್ ಗೂನಡ್ಕ, ಗೂನಡ್ಕ ಪೇರಡ್ಕ ಜುಮ ಮಸೀದಿಯ ಉಪಾಧ್ಯಕ್ಷರಾದ ಟಿ ಬಿ ಹನೀಫ್ ಗೂನಡ್ಕ, ಕಾರ್ಯದರ್ಶಿ ಪಿ ಕೆ ಉಮ್ಮರ್ ಜಡ್ಜ್ ಗೂನಡ್ಕ,ಖಜಾಂಜಿ ತೆಕ್ಕಿಲ್ ಮೊಹಮದ್ ಕುಂಞಿ, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ಮುನೀರ್ ದಾರಿಮಿ ಅಭಿನಂದಿಸಿದ್ದಾರೆ.

Related Articles

Back to top button