ಉಡುಪಿ – ಆದಿತ್ಯವಾರ 18 ಮಂದಿಗೆ ಕೊರೋನಾ ಪಾಸಿಟಿವ್…

ಉಡುಪಿ: ಉಡುಪಿ ಜಿಲ್ಲೆಯ 18 ಮಂದಿಯಲ್ಲಿ ಭಾನುವಾರ ಕರೋನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡಿದೆ.

ಈ 18 ಕೊರೊನಾ ಪ್ರಕರಣಗಳ ಪೈಕಿ 7 ಮಂದಿ ಮಹಿಳೆಯರಾಗಿದ್ದು ಮೂವರು ಮಕ್ಕಳಾಗಿದ್ದಾರೆ. ಇಬ್ಬರಿಗೆ ಕಂಟೈನ್‌ಮೆಂಟ್‌ ಝೋನ್‌ ಸಂಪರ್ಕದಿಂದ ಕೊರೊನಾ ದೃಢಪಟ್ಟಿದ್ದು, ಮತ್ತಿಬ್ಬರಿಗೆ ಕೊರೊನಾ ಹರಡಿದ ಸಂಪರ್ಕವನ್ನು ಪತ್ತೆಹಚ್ಚಲಾಗುತ್ತಿದೆ. ಇನ್ನುಳಿದ 14 ಮಂದಿಯೂ ಕೂಡಾ ಮಹಾರಾಷ್ಟ್ರದಿಂದ ವಾಪಾಸ್‌ ಆದವರಾಗಿದ್ದಾರೆ. 18 ಪ್ರಕರಣಗಳಲ್ಲಿ ಕಾರ್ಕಳ ಗ್ರಾಮಾಂತರ, ಅಜೆಕಾರು ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಯ ಮೂವರು ಪೊಲೀಸ್ ಸಿಬ್ಬಂದಿಗಳು ಸೇರಿದ್ದಾರೆ.

ಇನ್ನು ರಾಜ್ಯದಲ್ಲಿ ಮೇ 23ರ ಸಂಜೆ 5ರಿಂದ ಮೇ 24ರ ಮಧ್ಯಾಹ್ನ 12ರ ವರೆಗೂ 97 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಸೋಂಕಿತರ ಸಂಖ್ಯೆ 2,056ಕ್ಕೆ ಏರಿಕೆಯಾಗಿದೆ.
ಚಿಕ್ಕಬಳ್ಳಾಪುರದಲ್ಲಿ 26, ಉಡುಪಿಯಲ್ಲಿ 18, ದಾವಣಗೆರೆಯಲ್ಲಿ 4, ಕಲಬುರಗಿಯಲ್ಲಿ 6, ತುಮಕೂರಿನಲ್ಲಿ 2, ಯಾದಗಿರಿಯಲ್ಲಿ 6, ಹಾಸನದಲ್ಲಿ 14, ಧಾರವಾಡದಲ್ಲಿ 2, ಕೊಡಗಿನಲ್ಲಿ 1, ಮಂಡ್ಯದಲ್ಲಿ 15, ವಿಜಯಪುರದಲ್ಲಿ 1, ಉತ್ತರ ಕನ್ನಡದಲ್ಲಿ 2, ದಕ್ಷಿಣ ಕನ್ನಡದಲ್ಲಿ 1 , ದಾವಣಗೆರೆ 18, ಚಿತ್ರದುರ್ಗ 4, ಬಾಗಲಕೋಟೆ 3, ಹಾವೇರಿ 1 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದೆ.

Sponsors

Related Articles

Leave a Reply

Your email address will not be published. Required fields are marked *

Back to top button