ದ.ಕ – ವಿಟ್ಲ ಠಾಣೆ ಪೊಲೀಸ್ ಪೇದೆಗೆ ಕೊರೊನ ಸೋಂಕು ಪತ್ತೆ…
ಮಂಗಳೂರು: ವಿಟ್ಲ ಪೊಲೀಸ್ ಠಾಣೆಯ ಪೇದೆಯೋರ್ವರಿಗೆ ಇಂದು(ಆದಿತ್ಯವಾರ) ಕೊರೊನ ಸೋಂಕು ದೃಢವಾಗಿದೆ.
ಕರೋಪಾಡಿ ಯುವಕ ಪರಿಚಿತರ ಕಾರಲ್ಲಿ ದೇರಳಕಟ್ಟೆ ಆಸ್ಪತ್ರೆಗೆ ಆಗಮಿಸಿ, ಅಲ್ಲಿಂದ ಆ್ಯಂಬುಲೆನ್ಸ್ ನಲ್ಲಿ ವಿಟ್ಲ ಕ್ವಾರಂಟೈನ್ ಕೇಂದ್ರಕ್ಕಾಗಮಿಸಿದ್ದರು. ಆದರೆ ಕೇಂದ್ರ ಬೀಗ ಹಾಕಿದ್ದರಿಂದ ಅವರು ವಿಟ್ಲ ಠಾಣೆಗೆ ತೆರಳಿ ಪೊಲೀಸರ ಸಹಾಯದೊಂದಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕ್ವಾರಂಟೈನ್ ಗೊಳಗಾಗಿದ್ದರು. ಬಳಿಕ ಕರೋಪಾಡಿ ಯುವಕನಿಗೆ ಕೋವಿಡ್-19 ಪಾಸಿಟಿವ್ ಆಗಿತ್ತು. ಸದ್ಯ ಪೊಲೀಸರ ಸ್ವಾಬ್ ಟೆಸ್ಟ್ ವೇಳೆ ಒರ್ವ ಪೊಲೀಸ್ ಪೇದೆಯಲ್ಲಿ ಸೋಂಕು ಪಾಸಿಟಿವ್ ಆಗಿದೆ. ಇದರಿಂದಾಗಿ ಜಿಲ್ಲೆಯ ಒಟ್ಟು ಸೋಂಕು ಪ್ರಕರಣಗಳು 58ಕ್ಕೆ ಏರಿಕೆಯಾಗಿದೆ.