ಬಜರಂಗದಳ ಬಂಟ್ವಾಳ ಪ್ರಖಂಡದ ಸಂಚಾಲಕರಾಗಿ ಶಿವಪ್ರಸಾದ್ ತುಂಬೆ ಆಯ್ಕೆ….

ಬಂಟ್ವಾಳ: ವಿಶ್ವ ಹಿಂದೂ ಪರಿಷತ್; ಬಜರಂಗದಳ ಬಂಟ್ವಾಳ ಪ್ರಖಂಡದ ಸಂಚಾಲಕರಾಗಿ ಶಿವಪ್ರಸಾದ್ ತುಂಬೆ ಹಾಗೂ ಗೋರಕ್ಷ ಪ್ರಮುಖ್ ಆಗಿ ಅಭಿನ್ ರೈ ಆಯ್ಕೆಯಾಗಿದ್ದಾರೆ.
ಪುತ್ತೂರು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಇದರ ಪ್ರಮುಖರಾದ ಸರಪಾಡಿ ಅಶೋಕ ಶೆಟ್ಟಿ ಭಗವಾಧ್ವಜ ನೀಡುವುದರ ಮುಖಾಂತರ ಅವರ ಆಯ್ಕೆಯನ್ನು ಘೋಷಿಸಿದರು.
ಈ ಸಂದರ್ಭದಲ್ಲಿ ಭರತ್ ಕುಂಡೇಲು, ಗುರುರಾಜ್ ಬಂಟ್ವಾಳ, ಅಕೇಶ್ ಬೆಂಜನಪದವು, ಭುವಿತ್ ಶೆಟ್ಟಿ ಅಮುಂಜೆ ಉಪಸ್ಥಿತರಿದ್ದರು.