ಅನ್ಸಾರ್ ವತಿಯಿಂದ ದರ್ಸ್ ವಿದ್ಯಾರ್ಥಿಗಳಿಗೆ ಕೊಡೆ ಮತ್ತು ಬೆಡ್ ವಿತರಣೆ…

ಜ್ಞಾನ ಜೀವನದ ಸಂಪತ್ತು, ವಿದ್ಯಾರ್ಥಿಗಳಿಗೆ ನೀಡುವ ಸಹಾಯ ಶ್ರೇಷ್ಠ ದಾನ -ಕೆ. ಎಂ. ಮುಸ್ತಫ…

ಸುಳ್ಯ: ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಗಾಂಧಿನಗರ ಸುಳ್ಯ ಇದರ ವತಿಯಿಂದ ಗಾಂಧಿನಗರ ಮಸೀದಿಯಲ್ಲಿ ದರ್ಸ್ ವ್ಯಾಸಂಗ ಮಾಡುತ್ತಿರುವ ಎಲ್ಲಾ ಮುತಅಲ್ಲಿoಗಳಿಗೆ ಕೊಡೆ ಮತ್ತು ಬೆಡ್ ವಿತರಣಾ ಸಮಾರಂಭ ನಡೆಯಿತು
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್ ವಹಿಸಿದ್ದರು.ಗಾಂಧಿನಗರ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆ. ಎಂ. ಮುಸ್ತಫ ವಿತರಿಸಿದರು.ಎಂಜೆಎಂ ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿ ಗಳಾಗಿ ಮುದರ್ರಿಸ್ ಇರ್ಫಾನ್ ಸಖಾಫಿ, ಜಮಾಅತ್ ಕಾರ್ಯದರ್ಶಿ ಹಾಜಿ ಇಸ್ಮಾಯಿಲ್, ಉಪಾಧ್ಯಕ್ಷ ಹಾಜಿ ಕೆ. ಎಂ. ಮಹಮ್ಮದ್ ಕೆಎಂಎಸ್,ಮಾಜಿ ಅಧ್ಯಕ್ಷ ಹಾಜಿ ಕೆ. ಬಿ.. ಮಹಮ್ಮದ್, ಅನ್ಸಾರ್ ಪದಾಧಿಕಾರಿಗಳಾದ ಕೆ. ಬಿ. ಸಂಶುದ್ದೀನ್, ಕೆ. ಬಿ. ಇಬ್ರಾಹಿಂ, ಹಾಜಿ ಎಸ್. ಅಬ್ದುಲ್ಲ, ಎನ್. ಎ. ಜುನೈದ್ ಕಟ್ಟೆಕ್ಕಾರ್ಸ್,ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಸಂಚಾಲಕ ಹಾಜಿ ಎಸ್. ಎಂ. ಅಬ್ದುಲ್ ಹಮೀದ್ ಮೊದಲಾದವರು ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಬಿ. ಎಂ. ಹನೀಫ್ ಸ್ವಾಗತಿಸಿ, ವಂದಿಸಿದರು.

whatsapp image 2023 07 08 at 6.25.43 pm
whatsapp image 2023 07 08 at 6.25.43 pm (1)
w
Sponsors

Related Articles

Back to top button