ಫರಂಗಿಪೇಟೆ- ಶ್ರೀ ಆಂಜನೇಯ ದೇವಸ್ಥಾನ ಆಕರ್ಷಣೆ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ…

ಆಕರ್ಷಕ ಭವ್ಯ ಶೋಭಯಾತ್ರೆ 100ಕ್ಕೂ ಮಿಕ್ಕಿ ಹೊರೆ ಕಾಣಿಕೆಯ ವಾಹನಗಳು, 15 ಸಾವಿರಕ್ಕೋ ಅಧಿಕ ಹನುಮ ಭಕ್ತರು ಭಾಗಿ...

ಬಂಟ್ವಾಳ : ತಾಲೂಕಿನ ಫರಂಗಿಪೇಟೆಯ ವಿಜಯನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶಿಲಾಮಯ ಶ್ರೀ ಆಂಜನೇಯ ದೇವಸ್ಥಾನದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಜ.21ರಿಂದ 26ರ ವರೆಗೆ ಉಡುಪಿ ಅದಮಾರು ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಈಶ ತೀರ್ಥ ಶ್ರೀಪಾದಂಗಳರವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದ್ದು, ಈ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣ ಮೆರವಣಿಗೆಯನ್ನು ವೇದಮೂರ್ತಿ ಮುರಳಿಧರ ಭಟ್ ಕಳ್ಳತಡಮೆ ಇವರ ಪ್ರಾರ್ಥನೆಯೊಂದಿಗೆ ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷ ಅಜಿತ್ ಚೌಟ ತೆಂಗಿನ ಕಾಯಿ ಹೊಡೆದು ಚಾಲನೆ ನೀಡಿದರು.

ಏಕ ಕಾಲದಲ್ಲಿ ಹಸಿರು ಹೊರೆ ಕಾಣಿಕೆ ಸಮರ್ಪಣೆ ಯ ಭವ್ಯ ಶೋಭಯಾತ್ರೆಯು ಅಡ್ಯಾರು ಶ್ರೀ ವೀರಾಂಜನೇಯ ದೇವಸ್ಥಾನ ಹಾಗೂ ಬ್ರಹ್ಮರಕೊಟ್ಲು ಬ್ರಹ್ಮಸನ್ನಿಧಿಯಿಂದ ಸಹಸ್ರರು ಭಕ್ತ ಭಕರು, ಕಲಶ ಹೊತ್ತ ಮಾತೆಯರು, ಕುಣಿತ ಭಜನಾ ತಂಡ, ಚೆಂಡೆ, ತಾಲಿಮು, ಸೀತಾರಾಮ ಹನುಮರ ಭವ್ಯ ಸ್ಥಬ್ದಚಿತ್ರ ಸಹಿತ ನೂರಾರು ಭಗವದ್ವಜ ಹೊತ್ತ ವಾಹನಗಳು ದಾರಿಯುದ್ಧಕ್ಕೂ ಕೇಸರಿಮಯ ಭಗವದ್ವಜ ಆಕರ್ಷಕ ಕಮಾನು ಮೆರವಣಿಗೆಗೆ ಮೆರಗು ನೀಡಿದವು.

ಸುಮಾರು 15ಸಾವಿರಕ್ಕೋ ಅಧಿಕ ಭಕ್ತರ ಪಾಲ್ಗೊಳ್ಳಯುವಿಕೆಯಲ್ಲಿ 100ಕ್ಕೂ ಅಧಿಕ ವಾಹನಗಳಲ್ಲಿ ಹೊರೆ ಕಾಣಿಕೆಯು ದೇವಸ್ಥಾನಕ್ಕೆ ಸಮರ್ಪಣೆಯಾಯಿತು.

ಈ ಸಂದರ್ಭದಲ್ಲಿ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ,ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ಮಹಾಬಲ ಕೊಟ್ಟಾರಿ ಮುನ್ನೂರು, ಪ್ರ. ಕಾರ್ಯದರ್ಶಿ ಉಮೇಶ್ ಶೆಟ್ಟಿ ಬರ್ಕೆ, ಕಾರ್ಯಾಧ್ಯಕ್ಷ ತಾರಾನಾಥ ಕೊಟ್ಟಾರಿ,ಸಂಚಾಲಕ ವಿಠ್ಠಲ್ ಆಳ್ವ ಗರೋಡಿ ,ಕಾರ್ಯಾಧ್ಯಕ್ಷ ಅರ್ಕುಳ ಕಂಪ ಸದಾನಂದ ಆಳ್ವ ,ವೀರಾಂಜನೇಯ ವ್ಯಾಯಾಮ ಶಾಲೆ ಅದ್ಯಕ್ಷ ಚಂದ್ರಶೇಖರ ಗಂಭೀರ ,ಪ್ರದಾನ ಸಂಚಾಲಕ ದೇವಸ್ಯ ಪ್ರಕಾಶ್ ಚಂದ್ರ ರೈ, ಕೋಶಾಧಿಕಾರಿ ಉಮೇಶ್ ಸಾಲ್ಯಾನ್ ಬೆಂಜನಪದವು,ಜಯರಾಜ ಕೊಟ್ಟಾರಿ,, ಜಯರಾಜ್ ಕರ್ಕೆರ, ಸಂತೋಷ ಗಾಂಭೀರ, ರವೀಂದ್ರ ಕಂಬಳಿ,ಗಣೇಶ್ ಸುವರ್ಣ , ಕವಿತಾ ದೇವದಾಸ ಅರ್ಕುಳ ಮತ್ತಿತರರ ಪದಾಧಿಕಾರಿಗಳು ಇದ್ದರು.

Sponsors

Related Articles

Back to top button