ಸುದ್ದಿ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಸುಳ್ಯದಲ್ಲಿ ಅದ್ಧೂರಿ ಸ್ವಾಗತ…

ಸುಳ್ಯ: ಸುಳ್ಯ ನ್ಯಾಯಾಲಯಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರನ್ನು ಪೈಚಾರಿನಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಅವರ ನೇತೃತ್ವದಲ್ಲಿ ಅಲ್ಪಸಂಖ್ಯಾತರ ಮುಖಂಡರು ಹಾಗು ಕಾರ್ಯಕರ್ತರು ಶಾಲು ಹಾಗೂ ಏಲಕ್ಕಿ ಮಾಲೆ ಹಾಕಿ ಅದ್ದೂರಿಯಿಂದ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಿ. ಕೆ ಹಮೀದ್ ಗೂನಡ್ಕ , ವಹೀದಾ ಇಸ್ಮಾಯಿಲ್, ಪಿ. ಎ ಮುಹಮ್ಮದ್ ,ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿಯಾದ ತಾಜು ಮುಹಮ್ಮದ್ ಸಂಪಾಜೆ, ಕೆಪಿಸಿಸಿ ಸಾಮಾಜಿಕ ಜಾಲತಾಣದ ಕಾರ್ಯದರ್ಶಿಯಾದ ರಿಯಾಜ್ ಕಲ್ಲುಗುಂಡಿ,ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಅಬುಸಾಲಿ ಗೂನಡ್ಕ , ದಕ್ಷಿಣಕನ್ನಡ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾದ ಇದ್ದುಕುಂಞ, ಅರಂತೋಡು ತಾಲೂಕು ಪಂಚಾಯಿತಿ ಕ್ಷೇತ್ರದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ರಹೀಂ ಬೀಜದಕಟ್ಟೆ, ಸುಳ್ಯ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾದ ಸಿದ್ದೀಕ್ ಕೊಕ್ಕೋ, ಅಸ್ತ್ರ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಅರ್. ಬಿ ಬಶೀರ್,ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಟಿ, ಹನೀಫ್ ಕುಂಡಿಲ್, ಎನ್. ಎಸ್. ಯು. ಐ ಸುಳ್ಯ ಪ್ರಧಾನ ಕಾರ್ಯದರ್ಶಿ ಉಬೈಸ್ ಗೂನಡ್ಕ , ಹಿರಿಯ ಉದ್ಯಮಿ ಅಬೂಬಕ್ಕರ್ ಪೈಚರ್, ಅನ್ವರುಲ್ ಹುದ ಅಸೋಸಿಯನ್ ಅಧ್ಯಕರಾದ ಮಜೀದ್ ಅರಂತೋಡು,ಯುವ ಉದ್ಯಮಿ ಸಲೀಂ ಪೆರಂಗೊಡಿ, ಕಾಂಗ್ರೇಸ್ ಕಾರ್ಯಕರ್ತರಾದ ಅಜುರುದ್ದಿನ್ ಗೂನಡ್ಕ, ರಝಕ್ ಶಾಮಿ, ಜುಬೈರ್ ಅರಂತೋಡು, ರಿಜ್ವಾನ್ ಗೂನಡ್ಕ, ಇರ್ಶಾದ್ ಗೂನಡ್ಕ, ಮೊದಲಾದವರು ಉಪಸ್ಥಿತರಿದ್ದರು.

Advertisement

Related Articles

Back to top button