ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಎಂಪ್ಲಾಯೀಸ್ ಯೂನಿಯನ್- ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಸಿ ಎಚ್ ಆಯ್ಕೆ…

ಪುತ್ತೂರು: ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಎಂಪ್ಲಾಯೀಸ್ಯೂನಿಯನ್ (ರಿ )H M S. 2023 ಸಾಲಿನ ವಾರ್ಷಿಕ ಮಹಾಸಭೆಯು ಜ. 26ರಂದು ಲಯನ್ಸ್ ಸೇವಾ ಸದನ ದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ತೀರ್ಥರಾಮ ಎಸ್. ಅತಿಥಿಗಳನ್ನು ಸ್ವಾಗತಿಸಿದರು. ಅತಿಥಿಗಳು ದೀಪ ಪ್ರಜ್ವಲಿಸುವುದರೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. 2023 ನೇ ಸಾಲಿನ ವರದಿಯನ್ನು ಸಂಘದ ಕಾರ್ಯದರ್ಶಿಗಳಾದ ನವೀನ್ ಕುಮಾರ್, ಲೆಕ್ಕಪತ್ರವನ್ನು ಸುನಿಲ್ ರವರು ಮಂಡಿಸಿದರು. ಸಂಘದ ಗೌರವ ಅಧ್ಯಕ್ಷರಾದ ಸುರೇಶ್ ಚಂದ್ರ ಶೆಟ್ಟಿ ಸಭೆಯನ್ನು ಉದ್ದೇಶಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಕ್ಯಾಂಪ್ಕೋ ಚಾಕಲೇಟ್ ಸಂಸ್ಥೆಯ 2023ರ ವರ್ಷದಲ್ಲಿ ನಿವೃತ್ತಿ ಹೊಂದಿದ 14 ಮಂದಿ ಸಹೋದ್ಯೋಗಿ ಮಿತ್ರರಿಗೆ ಯೂನಿಯನ್ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
2024 ಮತ್ತು 2025 ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿ ರಚನೆಯಾಯಿತು. ಸಂಘದ ಸಂಘಟನಾ ಕಾರ್ಯದರ್ಶಿಯಾದ ಪದ್ಮನಾಭರವರು ವಂದಿಸಿದರು.
ಹೊಸ ಆಡಳಿತ ಮಂಡಳಿ ಯನ್ನು ಜ.29 ರಂದು ಯೂನಿಯನ್ ಆಫೀಸ್ ನಲ್ಲಿ ರಚಿಸಲಾಯಿತು. ಗೌರವ ಅದ್ಯಕ್ಷರಾಗಿ ಶ್ರಿ ಸುರೇಶ್ಚಂದ್ರ ಶೆಟ್ಟಿ,ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಸಿ ಎಚ್ , ಉಪಾಧ್ಯಕ್ಷರಾಗಿ ರಾಮಕೃಷ್ಣ ಶೆಣೈ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್,ಜತೆ ಕಾರ್ಯದರ್ಶಿಯಾಗಿ ಪದ್ಮನಾಭ್,ಖಜಾಂಚಿ ಬಾಲಕೃಷ್ಣ ಪಿ ಆರ್,ಸಂಘಟನಾ ಕಾರ್ಯದರ್ಶಿಗಳಾಗಿ ಅನಂತಕೃಷ್ಣ,ಕಿರಣ್ ಕುಮಾರ್, ತೀರ್ಥರಾಂ, ಸಂತೋಷ್ ರವರನ್ನು ಆಯ್ಕೆ ಮಾಡಲಾಯಿತು.

whatsapp image 2024 02 03 at 10.56.40 am

whatsapp image 2024 02 03 at 11.06.02 am

whatsapp image 2024 02 05 at 9.38.33 am

Sponsors

Related Articles

Back to top button