ಕಲ್ಲಡ್ಕ ಸರಕಾರಿ ಹಿ.ಪ್ರಾ.ಶಾಲೆ- ಮನವಿಗೆ ಸ್ಪಂದಿಸಿದ ಶೌರ್ಯ ವಿಪತ್ತು ತಂಡ…

ಬಂಟ್ವಾಳ: ಬಂಟ್ವಾಳ ತಾಲೂಕಿನ ಕಲ್ಲಡ್ಕ ಸರಕಾರಿ ಮಾದರಿ ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಶಾಲಾ ಆವರಣದಲ್ಲಿರುವ ದೊಡ್ಡ ಕುಡಿಯುವ ನೀರಿನ ಟ್ಯಾಂಕಿ ಹಾಗೂ ಭಾವಿಯ ಸ್ವಚ್ಛತೆ ಮಾಡಿಕೊಡುವಂತೆ ಸ್ಥಳೀಯ ಕಲ್ಲಡ್ಕ ಶೌರ್ಯ ವಿಪತ್ತು ತಂಡಕ್ಕೆ ಲಿಖಿತ ಮನವಿ ಸಲ್ಲಿಸಿದ್ದು, ಮನವಿ ಸ್ವೀಕರಿಸಿದ ಶೌರ್ಯ ತಂಡದ ಸದಸ್ಯರು ಈಗಾಗಲೇ ಶಾಲೆ ಆರಂಭವಾದ ಕಾರಣ ಕೂಡಲೆ ಕಾರ್ಯಪ್ರವೃತ್ತರಾಗಿ ತಂಡದ 11 ಸದಸ್ಯರು ಶ್ರಮದಾನದ ಮೂಲಕ ಶಾಲಾ ಆವರಣದಲ್ಲಿರುವ ದೊಡ್ಡ ಟ್ಯಾಂಕಿ ಹಾಗೂ ಬಾವಿಯನ್ನು ಸ್ವಚ್ಛ ಮಾಡಿಕೊಟ್ಟರು.
ಈ ಸ್ವಚ್ಛತಾ ಕಾರ್ಯದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಅಧ್ಯಕ್ಷ ತುಳಸಿ, ಶೌರ್ಯ ವಿಪತ್ತು ತಂಡದ ಅಧ್ಯಕ್ಷ ಮಾಧವ ಸಾಲಿಯಾನ್ ಕುದ್ರೆಬೆಟ್ಟು, ತಂಡದ ಸಂಯೋಜಕಿ ವಿದ್ಯಾ, ಸದಸ್ಯರುಗಳಾದ ವೆಂಕಪ್ಪ, ರವಿಚಂದ್ರ,ಮೌರೀಶ್, ರಮೇಶ್, ಚಿನ್ನಾ, ಸಂತೋಷ್, ಧನಂಜಯ, ಗಣೇಶ್, ಮೊದಲಾದವರು ಭಾಗವಹಿಸಿದ್ದರು. ಕಲ್ಲಡ್ಕ ಶೌರ್ಯ ತಂಡದ ಕಾರ್ಯಕ್ಕೆ ಶಾಲಾಭಿವೃದ್ಧಿ ಸಮಿತಿ, ಮುಖ್ಯ ಶಿಕ್ಷಕ ಹಾಗೂ ಶಿಕ್ಷಕರು ಅಭಿನಂದನೆಯನ್ನು ವ್ಯಕ್ತಪಡಿಸಿದ್ದಾರೆ.