ಮಂಗಳೂರು – ಮೂರು ದಿನಗಳ ಅಂತರ್ ರಾಷ್ಟ್ರೀಯ ಗಾಳಿಪಟ ಉತ್ಸವ ಆರಂಭ ….

ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ ಪಣಂಬೂರು ಬೀಚ್‌ನಲ್ಲಿ ನಡೆಯುತ್ತಿರುವ ಮೂರು ದಿನಗಳ ಅಂತರ್ ರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಶುಕ್ರವಾರ ಶಾಸಕ ಡಾ.ಭರತ್ ಶೆಟ್ಟಿ ವೈ ಉದ್ಘಾಟನೆ ಮಾಡಿದ್ದಾರೆ.
ಕರಾವಳಿ ಉತ್ಸವದ ಭಾಗವಾಗಿ ಜಿಲ್ಲಾಡಳಿತ ಆಯೋಜನೆ ಮಾಡಿರುವ ಈ ಅಂತರ್ ರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ 6 ದೇಶಗಳಿಂದ 16 ಜನ ಹಾಗೂ ದೇಶೀಯ 25ಕ್ಕೂ ಅಧಿಕ ಹೆಸರಾಂತ ಗಾಳಿಪಟ ಕ್ರೀಡಾಳುಗಳು ಭಾಗವಹಿಸಿದ್ದಾರೆ.
ಮಲೇಶಿಯಾ, ಇಸ್ರೇಲ್, ಇಂಡೋನೇಷ್ಯಾ, ಚೀನ ಗುಜರಾತ್, ನೆದರ್‌ಲ್ಯಾಂಡ್, ರಾಜಕೋಟ್, ಇಂಡಿಯಾ ಸಹಿತ ವಿವಿದೆಡೆಯಿಂದ ಗಾಳಿಪಟ ಹಾರಾಟಗಾರರು ಆಗಮಿಸಿ ವಿವಿಧ ರೀತಿಯ ಆಕರ್ಷಕ ಗಾಳಿಪಟಗಳನ್ನು ಹಾರಿಸಿದ್ದಾರೆ. ಹಾಗೆಯೇ ಯಕ್ಷಗಾನ ಹಾಗೂ ತಿರಂಗ ಗಾಳಿಪಟವು ವೀಕ್ಷಕರ ಗಮನ ಸೆಳೆದಿದೆ.
ಇಂಡೋನೇಷ್ಯಾದ ಲೆಯನಾವತಿ, ಆಂಟನ್ಯೂಯೆಸ್ ಅವರ ಬೃಹತ್ ಆಂಜನೇಯನ ಗಾಳಿಪಟ, ನೆದರ್‌ಲ್ಯಾಂಡ್ ತಂಡದ ಬೃಹತ್ ಕುದುರೆ, ಗೋಲಾಕಾರದ ಗಾಳಿಪಟಗಳು ಜನರ ಗಮನ ಸೆಳೆದಿದೆ. ಈ ಗಾಳಿಪಟ ಉತ್ಸವದೊಂದಿಗೆ ಆಹಾರೋತ್ಸವ, ನೃತ್ಯ ವೈವಿಧ್ಯ ಮೊದಲಾದ ಕಾರ್ಯಕ್ರಮಗಳು ನಡೆಯುತ್ತಿದ್ದು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದೆ.