ಸಹ್ಯಾದ್ರಿಯಲ್ಲಿ ರಾಷ್ಟ್ರೀಯ ಮಟ್ಟದ ಏರೋಮೋಡೆಲಿಂಗ್ ಸ್ಪರ್ಧೆ “ಏರೋಫಿಲಿಯಾ 2019” ಉದ್ಘಾಟನೆ….
ಮಂಗಳೂರು:ಏರೋಫಿಲಿಯಾ 2019 ಎರಡು ದಿನಗಳ ರಾಷ್ಟ್ರೀಯ ಮಟ್ಟದ ಏರೋಮೋಡೆಲಿಂಗ್ ಸ್ಪರ್ಧೆಯು ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನಲ್ಲಿ ಸೆ.20 ರಂದು ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಜಿ ಭಾರತೀಯ ನೌಕಾಪಡೆಯ ಕಮ್ಯಾಂಡರ್, ಭಾರತದ ಏರೋಮೋಡೆಲಿಂಗ್ ಅಸೋಸಿಯೇಶನ್ ನ ಪ್ರಧಾನ ಸದಸ್ಯ ಟಿ. ಆರ್. ಎ. ನಾರಾಯಣನ್ ಅವರು ಪೇಪರ್ ಪ್ಲೇನ್ ಸ್ಪರ್ಧೆಯಿಂದ ಅವರು ಸಾಕಷ್ಟು ಪ್ರಭಾವಿತರಾದರು ಮತ್ತು “ಪೇಪರ್ ವಿಮಾನಗಳು ಕೇವಲ ಮಕ್ಕಳಿಗಾಗಿ ಅಲ್ಲ. ಸರಳ ವಿಮಾನಗಳಿಗೆ ಹೋಲುವ ವಿಜ್ಞಾನವು ಉನ್ನತ ಮಟ್ಟದ ವೈಜ್ಞಾನಿಕತೆಯಾಗಿದೆ” ಎಂದು ಹೇಳಿದರು. ಕಾರ್ಯಕ್ರಮವನ್ನು ಆಯೋಜಿಸಿದ ಮತ್ತು ಭಾಗವಹಿಸಿದ ವಿದ್ಯಾರ್ಥಿಗಳ ಉತ್ಸಾಹವನ್ನುಅವರು ಶ್ಲಾಘಿಸಿದರು.
ಚೀನಾದ ಏರ್ಬಸ್ ಏರೋಸ್ಪೇಸ್ ಹೆಲಿಕಾಪ್ಟರ್ ಇದರ ಕಾಂಪೋಸಿಟ್ ಮ್ಯಾನೇಜರ್ ಅಶ್ವಿನ್ ಎಲ್ ಶೆಟ್ಟಿ ಅವರು ಮಾತನಾಡಿ “ಈ ರೀತಿಯ ಏರೋಮೋಡೆಲಿಂಗ್ ಸ್ಪರ್ಧೆಯು ಗಣಿತ ಮತ್ತು ಭೌತಶಾಸ್ತ್ರ ವಿಷಯಗಳನ್ನು ಏರೋನಾಟಿಕ್ಸ್ ಮತ್ತು ಏರೋಸ್ಪೇಸ್ ನಲ್ಲಿ ಹೇಗೆ ಉಪಯೋಗಿಸಬಹುದು ಎಂದು ಯೋಚಿಸುವಲ್ಲಿ ಯುವ ಮನಸ್ಸನ್ನು ಪ್ರಚೋದಿಸುತ್ತದೆ ” ಎಂದು ಹೇಳಿದರು.
ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನ ಅಧ್ಯಕ್ಷರಾದ ಶ್ರೀ ಮಂಜುನಾಥ ಭಂಡಾರಿ ಅವರು ಯುವ ಎಂಜಿನಿಯರ್ಗಳ ಮನಸ್ಸನ್ನು ಪ್ರೋತ್ಸಾಹಿಸವುದು ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಸ್ಪರ್ಧೆಯ ಮುಖ್ಯ ಉದ್ದೇಶ. ಈ ಕಾರ್ಯಕ್ರಮವನ್ನು ಟೀಮ್ ಚಾಲೆಂಜರ್ಸ್ ಆಯೋಜಿಸಿದೆ, ಇದು ವಿದ್ಯಾರ್ಥಿಗಳ ಕ್ಲಬ್ ಆಗಿದೆ ಮತ್ತು ಕಾರ್ಯಕ್ರಮವನ್ನು ಸಂಪೂರ್ಣವಾಗಿ ವಿದ್ಯಾರ್ಥಿಗಳಿಂದಲೇ ಆಯೋಜಿಸಲಾಗಿದೆ ಎಂದು ಹೇಳಿದರು.
ಏರೋಫಿಲಿಯಾ ಬ್ಯಾನರ್ನೊಂದಿಗೆ ಆರ್ಸಿ ವಿಮಾನವನ್ನು ಎತ್ತರಕ್ಕೆ ಹಾರಿಸಿ ಅತಿಥಿಗಳು ಏರೋಫಿಲಿಯಾ ಈವೆಂಟ್ ಪ್ರಾರಂಭ ಮಾಡಿದರು. ನಂತರ ವೃತ್ತಿಪರ RC ಫ್ಲೈಯರ್ ಗಳಾದ ಅಭಯ್ ಪವಾರ್ ಮತ್ತು ರಾಗವೇಂದ್ರ ಬಿ ಎಸ್ ವಿಮಾನವನ್ನು ಹಾರಿಸಿ ಅದ್ಭುತ ಏರ್ ಶೋ ಪ್ರದರ್ಶನ ನಡೆಸಿ ಕೊಟ್ಟರು.
ಇಸ್ರೋ ಸತ್ನವ್ ಕಾರ್ಯಕ್ರಮದ ಇಂಡಸ್ಟ್ರಿ ಇಂಟರ್ಫೇಸ್ ನ ಉಪ ನಿರ್ದೇಶಕರಾದ ಅಖಿಲೇಶ್ವರ ರೆಡ್ಡಿ ಹಾಗೂ ಮನೀಶ್ ಸಕ್ಸೇನಾ, ಪ್ರಿನ್ಸಿಪಾಲ ಡಾ. ಆರ್. ಶ್ರೀನಿವಾಸ ರಾವ್ ಕುಂಟೆ, ಉಪ ಪ್ರಾಂಶುಪಾಲರಾದ ಪ್ರೊ.ಎಸ್. ಬಾಲಕೃಷ್ಣ, ವಿಭಾಗ ಮುಖ್ಯಸ್ಥರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಐಐಟಿ ಮತ್ತು ಎನ್ಐಟಿಗಳು ಸೇರಿದಂತೆ ಭಾರತದ ವಿವಿಧ ಶಾಲೆಗಳು ಮತ್ತು ಕಾಲೇಜುಗಳ ಸುಮಾರು 1500 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.