ಮುದೆಲ್ ಮುಟ್ಟಿ ಶ್ರೀ ನಾಲ್ಕೈತ್ತಾಯ ದೈವಸ್ಥಾನದ ಸಂಪರ್ಕ ರಸ್ತೆಗೆ ಶಿಲಾನ್ಯಾಸ…
ಬಂಟ್ವಾಳ: ಸಜಿಪಮುನ್ನೂರು ಗ್ರಾಮದ ಮುದೆಲ್‌ಮುಟ್ಟಿ ಶ್ರೀ ನಾಲ್ಕೈತ್ತಾಯ ದೈವಸ್ಥಾನದ ಸಂಪರ್ಕ ರಸ್ತೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ರೂ.55 ಲಕ್ಷ ಅನುದಾನದಲ್ಲಿ ನಡೆಯಲಿರುವ ಕಾಂಕ್ರೀಟ್ ಕಾಮಗಾರಿಗೆ ಸ್ಥಳೀಯರು ಶಿಲಾನ್ಯಾಸ ನೆರೆವೇರಿಸಿದರು.
ಈ ಸಂಧರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ಪ್ರವೀಣ್ ಗಟ್ಟಿ, ಮಾಗಣೆ ತಂತ್ರಿ ಸುಬ್ರಹ್ಮಣ್ಯ ಭಟ್, ಜಯಶಂಕರ್ ಬಾಸ್ತ್ರಿತ್ತಾಯ, ಸುಂದರ, ಸರೋಜಿನಿ, ಸುಮತಿ ಎಸ್, ಎನ್ ಕೆ ಶಿವ, ರಾಜೇಶ್, ಜಯಲಕ್ಷ್ಮಿ, ಇದ್ದಿನಬ್ಬ ನಂದಾವರ, ಸಂದೀಪ್, ಅನಿತಾ, ಚಂದ್ರಕಲಾ, ಗಣೇಶ್, ವಿನೋದ್‌ರಾಜ್,ಚರಣ್ ಜುಮಾದಿಗುಡ್ಡೆ, ಸೋಮಶೇಖರ್, ಗುತ್ತಿಗೆದಾರರಾದ ಧೀರಾಜ್ ನಾಯ್ಕ್ ಉಪಸ್ಥಿತರಿದ್ದರು.