ಸಂಪಾಜೆ ಗಡಿಕಲ್ಲು ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಅವರಿಂದ 5 ಲಕ್ಷ ಅನುದಾನ….

ಸುಳ್ಯ: ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಗಡಿಕಲ್ಲು – ಮುಂಡಡ್ಕ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ರವರ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 5 ಲಕ್ಷ ರೂಪಾಯಿ ಅನುದಾನವನ್ನು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕರವರ ಮನವಿಯಂತೆ ಕೆಪಿಸಿಸಿಯ ಮಾಜಿ ಕಾರ್ಯದರ್ಶಿ ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ರವರ ಶಿಫಾರಸ್ಸಿನ ಮೇರೆಗೆ ಬಿಡುಗಡೆಗೊಂಡಿರುತ್ತದೆ.
ಅನುದಾನವನ್ನು ಒದಗಿಸಿದ ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹ್ಮದ್ ಹಾಗೂ ಶಿಫಾರಸ್ಸು ಮಾಡಿದ ಕಾಂಗ್ರೇಸ್ ಮುಖಂಡರಾದ ಟಿ.ಎಂ.ಶಹೀದ್ ತೆಕ್ಕಿಲ್ ರವರನ್ನು ಗ್ರಾ.ಪಂ. ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ಅಭಿನಂದಿಸಿದ್ದಾರೆ.

Related Articles