ಕಟೀಲಿನಲ್ಲಿ ಸಂಪನ್ನಗೊಂಡ ಶಿಕ್ಷಕ ಸಾಹಿತ್ಯ ಸಮ್ಮೆಳನ… 

ಸಾಹಿತ್ಯದಿಂದ  ಮನಸ್ಸು ಕಟ್ಟುವ ಕಾರ್ಯ ನಡೆಯಲಿ : ಡಾ.ಹರಿಕೃಷ್ಣ ಪುನರೂರು...

ಕಟೀಲು ಸೆ.6 :ಸಾಹಿತ್ಯ ಸಮ್ಮೇಳನಗಳು ಒಳ್ಳೆಯ ಮನಸ್ಸುಗಳನ್ನು ಕಟ್ಟುವ ಕಾರ್ಯ ಮಾಡಬೇಕು. ಸಾಹಿತ್ಯ  ಯಾವುದೇ ಪ್ರಕಾರದಲ್ಲಿದ್ದರೂ ಓದುಗರು ಮೆಚ್ಚುವಂತಿರಬೇಕು. ಶಿಕ್ಷಕರು ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಒಳ್ಳೆಯ ವಿಚಾರಗಳನ್ನು ಜನರಿಗೆ ನೀಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಹೇಳಿದರು.
ಅವರು ಕಟೀಲು ಕೇತ್ರದ ಸರಸ್ವತಿ ಸಭಾಭವನದಲ್ಲಿ ಏರ್ಪಡಿಸಲಾದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಮಟ್ಟದ ಶಿಕ್ಷಕ ಸಾಹಿತಿಗಳ 7ನೇ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ  ಕ್ಷೇತ್ರದ ಆನುವಂಶಿಕ ಅರ್ಚಕರಾದ ಹರಿನಾರಾಯಣ ಆಸ್ರಣ ದೀಪಪ್ರಜ್ವಲನೆ ಮಾಡಿ ಸಮ್ಮೇಳನಕ್ಕೆ ಚಾಲನೆ ನೀಡಿದರು. ಶ್ರೀ ಕ್ಷೇತ್ರದಲ್ಲಿ ಕಲೆ , ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತದೆ. ಶ್ರೀದೇವಿಯ ಅನುಗ್ರಹದಿಂದ ಕ್ಷೇತ್ರದಲ್ಲಿ ಭಕ್ತಾದಿಗಳ ಇಷ್ಟಾರ್ಥವು ನೆರವೇರುತ್ತವೆ ಎಂದು ಆಶೀರ್ವಚನ ನೀಡಿದರು.
ಹೊಸಕೋಟೆಯ ಹಿರಿಯ ಶಿಕ್ಷಕ ಸಾಹಿತಿ ಶ್ರೀಕಾಂತ್ ಕೆ.ವಿ. ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಕ.ಚು.ಸಾ.ಪ.ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ಉಡುಪಿ ಜಿಲ್ಲಾಧ್ಯಕ್ಷ ಜಿ.ಯು. ನಾಯಕ , ಉಪಾಧ್ಯಕ್ಷ ರಾಜು ಆಚಾರ್ಯ,  ಕಾರ್ಯದರ್ಶಿ ಶಾಂತ ಪುತ್ತೂರು, ಶೇಖರ ಗೌಡ ಪಾಟೀಲ ರಟ್ಟಿಹಳ್ಳಿ  ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಅಧ್ಯಕ್ಷ ಜಯಾನಂದ ಪೆರಾಜೆ ಸ್ವಾಗಿತಿಸಿದರು. ಅಪೂರ್ವ ಕಾರಂತ ನಿರೂಪಿಸಿ, ವಂದಿಸಿದರು.
Sponsors

Related Articles

Back to top button