ಪ್ರವಾದಿ ಮುಹಮದ್ ಮುಸ್ತಾಫ ಅವರ ಸಂದೇಶ ಪ್ರಪಂಚದ ಶಾಂತಿ ಮತ್ತು ಸೌಹಾರ್ದತೆಗೆ ದಿಕ್ಸೂಚಿ – ಟಿ ಎಂ ಶಾಹಿದ್ ತೆಕ್ಕಿಲ್…
ಸುಳ್ಯ: ಸಂಪಾಜೆ ಪ್ರವಾದಿ ಮುಹಮ್ಮದ್ ಮುಸ್ತಾಫಾ ಸಲ್ಲಲ್ಲಾಹು ಅಲೈವ ಸಲ್ಲಮ್ ಅವರು ನೀಡಿದ ಶಾಂತಿ ಮತ್ತು ಪ್ರೀತಿಯ ಸಂದೇಶ ಪ್ರಪಂಚಕ್ಕೆ ಮಾದರಿಯಾಗಿದೆ ಎಂದು ಟಿ ಎಂ ಶಾಹಿದ್ ತೆಕ್ಕಿಲ್ ಹೇಳಿದ್ದಾರೆ.
ಮುಸ್ಲಿಂ ಸಮುದಾಯ ಮತ್ತು ಪ್ರವಾದಿಯವರನ್ನು ಅವಹೇಳನ ಮಾಡಿದವರಿಗೆ ಸಮುದಾಯಕ್ಕೆ ವಿವಿಧ ರೀತಿಯಲ್ಲಿ ಅನ್ಯಾಯ, ವಿವಿಧ ಖಾಯಿದೆ ಮುಖಾಂತರ ಹತ್ತಿಕ್ಕುವ ಶಕ್ತಿಗಳಿಗೆ ನಾವು ಪ್ರವಾದಿಯವರು ಅನುಸರಿಸಿದ ಮಾದರಿ ಅನುಸರಿಸಬೇಕು.
ನಮ್ಮ ಆಚಾರ ವಿಚಾರಗಳನ್ನು ನೋಡಿ ಸಹೋದರ ಸಮುದಾಯ ನಮ್ಮನ್ನು ಪ್ರಶಂಸಿಸುವ ರೀತಿಯಲ್ಲಿ ಇರಬೇಕೆಂದು ಯುವಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮಹಿಯಾದ್ದಿನ್ ಜುಮಾ ಮಸ್ಜಿದ್ ಪೇರಡ್ಕ ಗೂನಡ್ಕ, ತೆಕ್ಕಿಲ್ ಮೊಹಮದ್ ಹಾಜಿ ಸ್ಮಾರಕ ತಕ್ವೀಯತುಲ್ ಇಸ್ಲಾಂ ಮದರಸ ಪೇರಡ್ಕ ಹಾಗೂ ಹಯಾತುಲ್ ಇಸ್ಲಾಂ ಮದರಸ ಗೂನಡ್ಕ ಇದರ ವತಿಯಿಂದ ನಡೆದ ಪ್ರವಾದಿ ಜನ್ಮ ದಿನಾಚರಣೆ ಪ್ರಯುಕ್ತ “ಮಜಿಲಿಸುಲ್ ಮಹಬ್ಬ 2k24” ಇದರ ಸಮಾರಂಭದಲ್ಲಿ ತಮ್ಮ ಅಧ್ಯಕ್ಷ ಭಾಷಣದಲ್ಲಿ ಸಮಸ್ತ ಊರಿನ ಜನರಿಗೆ ಕರೆ ನೀಡಿದರು ನಮ್ಮ ಹಿರಿಯರು ಸಂಪಾಜೆ ಪರಿಸರ ಸಹಿತ ಅಸುಪಾಸಿನ ಪ್ರದೇಶದಲ್ಲಿ ಸೌಹಾರ್ದತೆಯ ರಾಯಭಾರಿಗಳಗಿದ್ದರು ಎಂದರು.
ಸಮಾರಂಭವನ್ನು ಪೇರಡ್ಕ ಗೂನಡ್ಕ ಮಸೀದಿಯ ಖತೀಬ್ ಉಸ್ತಾದ್ ನಹೀಮ್ ಫೈಜಿ ದುವಾ ಮುಖಾಂತರ ನೆರೆವೇರಿಸಿ ವಿದ್ಯಾರ್ಥಿಗಳ ಯಶಸ್ವಿಯ ಬಗ್ಗೆ ಉಪದೇಶ ನೀಡಿದರು ಸಮಾರಂಭದಲ್ಲಿ ಜಮಾತ್ ಉಪಾಧ್ಯಕ್ಷ ಟಿ ಬಿ ಹನೀಫ್,ಕಾರ್ಯದರ್ಶಿ ಪಿ ಕೆ ಉಮ್ಮರ್ ಗೂನಡ್ಕ,ಎಂ ಆರ್ ಡಿ ಎ ಅಧ್ಯಕ್ಷರಾದ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ ಕೆ ಹಮೀದ್ ಗೂನಡ್ಕ,ಜಮಾತ್ ಖಜಾಂಜಿ ಟಿ ಎ ಮಹಮದ್ ಕುಂಞಿ ತೆಕ್ಕಿಲ್ ಪೇರಡ್ಕ, ಉಸ್ಮಾನ್ ಅರಂತೋಡು, ಹಮೀದ್ ಉಸ್ತಾದ್ ಹಾರಿಸ್, ಉಸ್ತಾದ್ ಮೊದಲಾದವರು ಉಪಸ್ಥಿತರಿದ್ದರು. ಮದರಸ ವಿದ್ಯಾರ್ಥಿಗಳು ಮತ್ತು ಜಮಾತ್ ಸದಸ್ಯರು ಪೇರಡ್ಕ ಗೂನಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ನಲ್ಲಿ ವಿಶೇಷ ಪ್ರಾರ್ಥನೆ ಮಾಡಿ ವಿವಿಧ ಕಾರ್ಯಕ್ರಮ ನಡೆಸಿದರು.